ಬೇಸಿಗೆ ಬಿಸಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ 5 ಆರೋಗ್ಯಕರ ಆಹಾರಗಳು
By Jayaraj Apr 28, 2024
Hindustan Times Kannada
ತಾಪಮಾನವು ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸಲು 5 ಉತ್ತಮ ಆಹಾರಗಳು ಇಲ್ಲಿವೆ.
ಮೊಸರು
ಮೊಸರು ದೇಹದಿಂದ ಶಾಖ ಹೀರಿಕೊಳ್ಳಲು ನೆರವಾಗಿ ತಂಪಾಗಿಸುವ ಗುಣ ಹೊಂದಿದೆ. ಇದರಲ್ಲಿ ಪ್ರೋಬಯಾಟಿಕ್ ಸಮೃದ್ಧವಾಗಿದ್ದು, ಕರುಳಿನ ಆರೋಗ್ಯ ಹೆಚ್ಚಿಸಿ ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ.
ವಿಟಮಿನ್ ಸಿ ಸಮೃದ್ಧ ಹಣ್ಣುಗಳು
ಕಿತ್ತಳೆ, ನಿಂಬೆಹಣ್ಣು, ಕಿವಿ, ಪಪ್ಪಾಯವನ್ನು ಹೆಚ್ಚಾಗಿ ಸೇವಿಸಿ. ವಿಟಮಿನ್ ಸಿ ದೇಹವನ್ನು ತಂಪಾಗಿಸಲು ಮತ್ತು ಚರ್ಮದ ಆರೋಗ್ಯ ಹೆಚ್ಚಿಸಲು ನೆರವಾಗುತ್ತದೆ.
ಸತು ಸಮೃದ್ಧವಾಗಿರುವ ಆಹಾರ
ಪಾಲಕ್, ಸಿಹಿ ಕುಂಬಳಕಾಯಿ ಬೀಜಗಳು ಮತ್ತು ಮಾಂಸದಲ್ಲಿ ಸತು ಹೇರಳವಾಗಿರುತ್ತದೆ. ಇದು ಬೇಸಿಗೆಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ ಆರೋಗ್ಯ ಉತ್ತೇಜಿಸಲು ಅವಶ್ಯಕ.
ಕಬ್ಬಿಣದಂಶ ಇರುವ ಆಹಾರಗಳು
ದೃಢ ಪ್ರತಿರಕ್ಷಣಾ ವ್ಯವಸ್ಥೆ ನಿರ್ಮಿಸಲು ಕಬ್ಬಿಣದ ಅಂಶ ನಿರ್ಣಾಯಕ. ನಟ್ಸ್, ಕಾಳುಗಳು ಮತ್ತು ಮತ್ತು ಹಸಿರು ತರಕಾರಿಗಳು ಕಬ್ಬಿಣದ ಅತ್ಯುತ್ತಮ ಮೂಲವಾಗಿದೆ.
ಗೆಣಸು
ಗೆಣಸಿನಲ್ಲಿ ಕಾರ್ಬೋಹೈಡ್ರೇಟ್ ಹೇರಳವಾಗಿರುತ್ತದೆ. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಕೂಡಾ ಇರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
Pexels and Pixabay
ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು