ಹಾಲನ್ನು ಅತಿಯಾಗಿ ಕುಡಿಯುವುದರಿಂದಾಗುವ 5 ಅಡ್ಡಪರಿಣಾಮಗಳಿವು 

By Reshma
Jun 09, 2024

Hindustan Times
Kannada

ಹಾಲಿನಲ್ಲಿರುವ ಪೋಷಕಾಂಶಗಳ ಕಾರಣದಿಂದ ಇದನ್ನು ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಆದರೆ ಅತಿಯಾಗಿ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳಿತಲ್ಲ. ಇದರಿಂದಾಗುವ 5 ಅಡ್ಡ ಪರಿಣಾಮಗಳೇನು ತಿಳಿಯಿರಿ. 

ಜೀರ್ಣಕ್ರಿಯೆ ಸಮಸ್ಯೆ 

ಅತಿಯಾಗಿ ಹಾಲು ಕುಡಿಯುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ಎದುರಾಗಬಹುದು. ಅದರಲ್ಲೂ ಲ್ಯಾಕ್ಟೋಸ್‌ ಅಸಹಿಷ್ಣುತೆಗೆ ಕಾರಣವಾಗಬಹುದು. ದೇಹವು ಲ್ಯಾಕ್ಟೋಸ್‌ ಮತ್ತು ಹಾಲಿನಲ್ಲಿರುವ ಸಕ್ಕರೆಯನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್‌, ಅತಿಸಾರದಂತಹ ಸಮಸ್ಯೆಗಳು ಎದುರಾಗಬಹುದು.

ಮೊಡವೆ ತೊಂದರೆ 

ಅತಿಯಾದ ಹಾಲಿನ ಬಳಕೆ, ಅದರಲ್ಲೂ ಕೆನೆಭರಿತ ಹಾಲ ಕುಡಿಯುವುದರಿಂದ ಮೊಡವೆ ಸಮಸ್ಯೆ ಹೆಚ್ಚಬಹುದು. ಹಾಲಿನಲ್ಲಿರುವ ಕೆಲವು ಹಾರ್ಮೋನುಗಳು ಮೊಡವೆಗಳ ಉಲ್ಭಣಕ್ಕೆ ಕಾರಣವಾಗಬಹುದು. 

ಕಿಡ್ನಿ ಸ್ಟೋನ್‌ 

ಅತಿಯಾಗಿ ಹಾಲು ಕುಡಿಯುವುದರಿಂದ ಮೂತ್ರಪಿಂಡದಲ್ಲಿನ ಕಲ್ಲುಗಳ ರಚನೆಗೆ ಕಾರಣವಾಗಬಹುದು. ಹಾಲಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿರುತ್ತದೆ. ಮೂಳೆಯ ಆರೋಗ್ಯಕ್ಕೆ ಕ್ಯಾಲ್ಸಿಯಂ ಅತ್ಯಗತ್ಯ. ಆದರೆ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾದರೆ ಕಿಡ್ನಿ ಸ್ಟೋನ್‌ ಉಂಟಾಗಲು ಕಾರಣವಾಗಬಹುದು. 

ತೂಕ ಇಳಿಕೆ 

ಹಾಲಿನಲ್ಲಿ ಕ್ಯಾಲೋರಿ ಅಂಶ ಸಮೃದ್ಧವಾಗಿರುತ್ತದೆ. ಅತಿಯಾಗಿ ಹಾಲು ಕುಡಿಯುವುದರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದ ಕ್ಯಾಲೊರಿ ಸೇರಬಹುದು. ಇದರಿಂದ ದೇಹ ತೂಕವು ಹೆಚ್ಚಳವಾಗಬಹುದು. ಅದರಲ್ಲೂ ಹಾಲಿಗೆ ಸಕ್ಕರೆ ಸೇರಿಸಿ ಕುಡಿಯುವುದು ಇನ್ನೂ ಅಪಾಯ. 

ಹೃದ್ರೋಗ ಸಮಸ್ಯೆ 

ಸಂಪೂರ್ಣ ಕೊಬ್ಬಿನಾಂಶ ಇರುವ ಹಾಲು ಸ್ಯಾಚುರೇಟೆಡ್‌ ಕೊಬ್ಬನ್ನು ಹೊಂದಿರುತ್ತದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಹೃದ್ರೋಗ ಅಪಾಯವೂ ಹೆಚ್ಚು. ಕೊಬ್ಬಿನಾಂಶ ಇರುವ ಹಾಲನ್ನು ಸೇವಿಸುವುದರಿಂದ ಹೃದಯರಕ್ತನಾಳದ ಸಮಸ್ಯೆಯನ್ನು ಹೆಚ್ಚಿಸಬಹುದು. 

ಅಸಲಿ, ನಕಲಿ ಬಾದಾಮಿಯನ್ನು ಗುರುತಿಸುವುದು ಹೇಗೆ?