ನಿಮಗೆ ಈ ಸಮಸ್ಯೆಗಳಿದ್ದರೆ ಬೆಂಡೆಕಾಯಿ ತಿನ್ನೋದು ತಕ್ಷಣ ನಿಲ್ಲಿಸಿ

By Reshma
Apr 25, 2024

Hindustan Times
Kannada

ತರಕಾರಿಗಳಲ್ಲಿ ಬೆಂಡೆಕಾಯಿ ಹಲವರಿಗೆ ಫೇವರಿಟ್‌. ಮಕ್ಕಳಿಗೂ ಇದು ಇಷ್ಟವಾಗೋದ್ರರಲ್ಲಿ ಅನುಮಾನವಿಲ್ಲ. ಬೆಂಡೆಕಾಯಿಯಿಂದ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು. 

ಇದು ಪೋಷಕಾಂಶಗಳ ಆಗರವಾಗಿದೆ. ಇದರಲ್ಲಿ ವಿಟಮಿನ್‌ ಎ, ಸಿ, ಇ, ಕಾರ್ಬೋಹೈಡ್ರೇಟ್‌, ಕಬ್ಬಿಣಾಂಶ, ನಾರಿನಾಂಶ, ಸತು, ತಾಮ್ರ, ಪೊಟ್ಯಾಶಿಯಂ, ಮೆಗ್ನಿಶಿಯಂ ಮುಂತಾದವುಗಳಿಂದ ಸಮೃದ್ಧವಾಗಿದೆ. 

ಬೆಂಡೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದು ತೂಕ ಇಳಿಕೆಗೂ ಸಹಕಾರಿ. ಕಣ್ಣಿನ ಆರೋಗ್ಯಕ್ಕೂ ಬೆಂಡೆಕಾಯಿ ಉತ್ತಮ. 

ಬೆಂಡೆಕಾಯಿ ಆರೋಗ್ಯಕ್ಕೆ ಉತ್ತಮ ಎನ್ನುವುದು ನಿಜ, ಆದರೆ ಇದನ್ನು ಅತಿಯಾಗಿ ತಿನ್ನುವುದರಿಂದ ಕೆಲವು ದೈಹಿಕ ಸಮಸ್ಯೆಗಳು ಎದುರಾಗಬಹುದು. 

ಗ್ಯಾಸ್ಟ್ರಿಕ್‌ ಅಥವಾ ಹೊಟ್ಟೆಯುಬ್ಬರದ ಸಮಸ್ಯೆ ಇರುವವರು ಬೆಂಡೆಕಾಯಿಯನ್ನು ಹೆಚ್ಚು ತಿನ್ನಬಾರದು. ಇದರಿಂದ ನಾರಿನಾಂಶ ಅಧಿಕವಾಗಿದ್ದು, ನಿಮಗೆ ತೊಂದರೆ ಉಂಟು ಮಾಡಬಹುದು. 

ನಿಮ್ಮ ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗಿದ್ದರೆ, ನೀವು ಸೈನಸ್‌ ಹಾಗೂ ಕೆಮ್ಮಿನ ಸಮಸ್ಯೆ ಹೊಂದಿದ್ದರೆ ಬೆಂಡೆಕಾಯಿ ಹೆಚ್ಚು ತಿನ್ನಬೇಡಿ. 

ನಿಮಗೆ ಕಿಡ್ನಿ ಸ್ಟೋನ್‌ ಇದ್ದರೆ ಅಥವಾ ಹಿಂದೆ ಈ ಸಮಸ್ಯೆಯಿಂದ ನೀವು ಬಳಸಲಿದ್ದರೆ, ಬೆಂಡೆಕಾಯಿ ತಿನ್ನದೇ ಇರುವುದು ಉತ್ತಮ. 

ಭಾರತದ ಅತೀ ಶ್ರೀಮಂತ ಶಾಸಕರು ಇವರು

Source: ADLR Delhi