ಮಧ್ಯಾಹ್ನದ ಹೊತ್ತು ನಿದ್ದೆ ಆವರಿಸುತ್ತಾ? ಇದೂ ಕಾರಣವಿರಬಹುದು

By Reshma
Jun 28, 2024

Hindustan Times
Kannada

ಕೆಲವೊಮ್ಮೆ ಮಧ್ಯಾಹ್ನ ಹೊತ್ತು ತುಂಬಾ ನಿದ್ದೆ ಆವರಿಸುತ್ತದೆ. ಮಧ್ಯಾಹ್ನ ಮಲಗಲೇ ಬೇಕು ಅನ್ನಿಸುತ್ತದೆ. ಈ ರೀತಿ ನಿಮಗೂ ಆಗುತ್ತಿದ್ದರೆ ಇದಕ್ಕೆ ಕಾರಣವೇನು ತಿಳಿಯಿರಿ. 

ಮಧ್ಯಾಹ್ನದ ಹೊತ್ತು ಅತಿಯಾಗಿ ತಿನ್ನುವುದು ತೂಕಡಿಕೆಗೆ ಕಾರಣವಾಗುತ್ತದೆ. ಅತಿಯಾಗಿ ತಿನ್ನುವುದು ನಿದ್ದೆ ಎಳೆಯಲು ಕಾರಣವಾಗುತ್ತದೆ. 

ರಾತ್ರಿ ಸರಿಯಾಗಿ ನಿದ್ದೆ ಮಾಡದೇ ಇದ್ದರೂ ಮಧ್ಯಾಹ್ನದ ವೇಳೆಗೆ ನಿದ್ದೆ ಆವರಿಸಲು ಆರಂಭಿಸುತ್ತದೆ. 

ಕಾರ್ಬೋಹೈಡ್ರೇಟ್‌ ಅಂಶ ಹೆಚ್ಚಿರುವ ಆಹಾರ ಸೇವನೆಯು ಮಧ್ಯಾಹ್ನದ ಹೊತ್ತು ನಿದ್ದೆ ಹೆಚ್ಚಲು ಕಾರಣವಾಗಬಹುದು. 

ಒತ್ತಡದ ಕಾರಣದಿಂದಲೂ ಮಧ್ಯಾಹ್ನದ ಹೊತ್ತು ನಿದ್ದೆ ಆವರಿಸುತ್ತದೆ. ಕೆಲಸದ ಒತ್ತಡ ಹೆಚ್ಚಾಗಿದ್ದಾಗ ನಿದ್ದೆ ಎಳೆಯಬಹುದು. 

ಬೆಳಗಿನ ಹೊತ್ತು ಅತಿಯಾದ ದೈಹಿಕ ಚಟುವಟಿಕೆಯು ಮಧ್ಯಾಹ್ನದ ಹೊತ್ತಿಗೆ ನಿದ್ದೆ ಎಳೆಯುವಂತೆ ಮಾಡುತ್ತದೆ. ದೇಹ ದಣಿದಾಗ ನಿದ್ದೆ ಬರುವುದು ಸಹಜ. 

Tulsi Plant: ತುಳಸಿ ಗಿಡದ ಆಧ್ಯಾತ್ಮಿಕ ವೈಶಿಷ್ಟ್ಯದ ಬಗ್ಗೆ ತಿಳಿದುಕೊಳ್ಳಿ

Pic Credit: Shutterstock