ನಿದ್ದೆ ಸಮಸ್ಯೆ ಹತ್ತಿರಕ್ಕೂ ಸುಳಿಬಾರ್ದು ಅಂದ್ರೆ ಈ ಕ್ರಮ ಪಾಲಿಸಿ 

By Reshma
Jun 28, 2024

Hindustan Times
Kannada

ಇತ್ತೀಚಿಗೆ ಹಲವರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಪರಿಹಾರವನ್ನು ನಾವೇ ಕಂಡುಕೊಳ್ಳಬಹುದು. 

ಈ ಕ್ರಮಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಿದ್ದೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಮಾತ್ರವಲ್ಲ. ಮಲಗಿದ ತಕ್ಷಣ ನಿದ್ದೆ ಮಾಡಲು ಸಾಧ್ಯವಾಗುತ್ತದೆ. 

ಹಾಸಿಗೆಯಲ್ಲಿ ಮಲಗಿದ ತಕ್ಷಣ ಏನು ಮಾಡಬೇಕು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ. 

ಕೆಫಿನ್‌ ಅಂಶ ಇರುವ ಪದಾರ್ಥಗಳನ್ನು ಸೇವಿಸಬೇಡಿ. ನಿದ್ರಾಹೀನತೆಯ ಸಮಸ್ಯೆ ಇರುವವರು ಮೊದಲು ಚಹಾ, ಕಾಫಿ ಕುಡಿಯುವುದನ್ನು ನಿಲ್ಲಿಸಬೇಕು. 

ಪ್ರತಿದಿನ ಕಬ್ಬಿಣ ಹಾಗೂ ಮೆಗ್ನಿಶಿಯಂ ಸಮೃದ್ಧ ಆಹಾರ ಸೇವಿಸಬೇಕು. 

ಉತ್ತಮ ನಿದ್ದೆಗಾಗಿ ನಿಮ್ಮ ಆಹಾರದಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧ ಆಹಾರವನ್ನು ಸೇರಿಸಿ. 

ಕಾರ್ಬೋಹೈಡ್ರೇಟ್‌ ಕೂಡ ನಿದ್ದೆಗೆ ಬಹಳ ಉತ್ತಮ. ಹಾಗಾಗಿ ರಾತ್ರಿ ಊಟದಲ್ಲಿ ಕಾರ್ಬೋಹ್ರೈಡೇಟ್‌ ಅಂಶ ಇರುವಂತೆ ನೋಡಿಕೊಳ್ಳಿ. 

ವಿಟಮಿನ್‌ ಬಿ 6 ಅಂಶ ಇರುವ ಆಹಾರಗಳ ಸೇವನೆಯಿಂದಲೂ ಉತ್ತಮ ನಿದ್ದೆ ಸಾಧ್ಯವಾಗುತ್ತದೆ. 

ಉತ್ತಮ ನಿದ್ದೆ ಪಡೆಯಲು ಮನುಷ್ಯನಿಗೆ ದೈಹಿಕ ವ್ಯಾಯಾಮ ಕೂಡ ಬಹಳ ಮುಖ್ಯ. ಪ್ರತಿದಿನ ವಾಕಿಂಗ್‌, ಯೋಗ, ವ್ಯಾಯಾಮ, ಧ್ಯಾನ ಇತ್ಯಾದಿಯನ್ನು ರೂಢಿಸಿಕೊಳ್ಳಿ. 

ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.  

ಅಸಲಿ, ನಕಲಿ ಬಾದಾಮಿಯನ್ನು ಗುರುತಿಸುವುದು ಹೇಗೆ?