ಬೇಸಿಗೆಯಲ್ಲಿ ದೇಹದಲ್ಲಿ ನೀರಿನಾಂಶದ ಕೊರತೆ ಕಾಡಬಾರದು ಅಂದ್ರೆ ಕಾಫಿ ಕುಡಿಯುವುದನ್ನು ತಪ್ಪಿಸಿ ಅಥವಾ ಮಿತವಾಗಿ ಕುಡಿಯಿರಿ.
ಉಪ್ಪಿನಕಾಯಿಯಲ್ಲಿ ಸಾಕಷ್ಟು ಲವಣಾಂಶವಿರುತ್ತದೆ. ಇದರ ಸೇವನೆಯಿಂದ ಡೀಹೈಡ್ರೇಷನ್ ಸಮಸ್ಯೆ ಕಾಣಿಸಬಹುದು. ಇದು ಜೀರ್ಣಕ್ರಿಯೆಗೂ ಅಡ್ಡಿಪಡಿಸಬಹುದು. ಹಾಗಾಗಿ ಬೇಸಿಗೆಯಲ್ಲಿ ಉಪ್ಪಿನಕಾಯಿ ತಿನ್ನುವುದು ಒಳಿತಲ್ಲ.
ಒಣಹಣ್ಣುಗಳು ಪೋಷಕಾಂಶಗಳ ಆಗರವಾಗಿದ್ದರೂ ಇದು ದೇಹದ ಉಷ್ಣತೆಯನ್ನು ಹೆಚ್ಚಿಸಬಹುದು. ಇದರಿಂದ ಬೇಸಿಗೆಯಲ್ಲಿ ಇನ್ನಷ್ಟು ಸುಸ್ತು ಹೆಚ್ಚಬಹುದು.
ಬೇಸಿಗೆಯಲ್ಲಿ ಮಿಲ್ಕ್‌ಶೇಕ್‌ಗಳನ್ನು ಕುಡಿಯಲು ಮನಸ್ಸು ಬಯಸುವುದು ಸಹಜ. ಆದರೆ ಇದರಲ್ಲಿ ಸಕ್ಕರೆ ಅಂಶ ಅತಿಯಾಗಿದ್ದು, ಇದರಿಂದ ನಿರ್ಜಲೀಕರಣ ಸಮಸ್ಯೆ ಕಾಡಬಹುದು.
ಕ್ಯಾಪ್ಸೈಸಿನ್ ಅಂಶ ಇರುವ ಮಸಾಲೆಪದಾರ್ಥಗಳು ಪಿತ್ತ ದೋಷವನ್ನು ಹೆಚ್ಚಿಸಬಹುದು. ಇದು ದೇಹದ ಉಷ್ಣಾಂಶವನ್ನು ಹೆಚ್ಚಿಸಿ, ಅತಿಯಾಗಿ ಬೆವರುವಂತೆ ಮಾಡುತ್ತದೆ. ಇದರಿಂದ ಡೀಹೈಡ್ರೇಷನ್ ಉಂಟಾಗಬಹುದು.
ತಾಪಮಾನ ಏರಿಕೆಯಾಗಿರುವ ಗ್ರಿಲ್ ಮಾಡಿರುವ ಮಾಂಸಾಹಾರಗಳನ್ನು ಸೇವಿಸುವುದರಿಂದ ದೇಹದ ತಾಪಮಾನ ಇನ್ನಷ್ಟು ಏರಿಕೆಯಾಗಬಹುದು.
ಸಮೋಸ, ಚಾಟ್ಸ್, ಫ್ರೆಂಚ್ ಫ್ರೈಸ್‌ನಂತಹ ಯಾವುದೇ ಕರಿದ ಪದಾರ್ಥಗಳು ಬೇಸಿಗೆಯಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟು ಮಾಡುವುದು ಮಾತ್ರವಲ್ಲ, ಇದು ಬೇಸಿಗೆಯಲ್ಲಿ ಜೀರ್ಣಿಕ್ರಿಯೆಗೂ ಅಡ್ಡಿಪಡಿಸಬಹುದು.
ಬೇಸಿಗೆಯಲ್ಲಿ ಸೋಡಾ ಹಾಗೂ ಸೋಡಾದ ಅಂಶ ಇರುವ ಪಾನೀಯಗಳನ್ನು ಸೇವಿಸಬಹುದರಿಂದ ಬೇಗನೆ ದೇಹ ಡೀಹೈಡ್ರೇಟ್ ಆಗಬಹುದು.
ಬೇಸಿಗೆಯಲ್ಲಿ ಆಲ್ಕೋಹಾಲ್ ಕುಡಿಯುವುದರಿಂದ ಡೀಹೈಡ್ರೇಷನ್ ಉಂಟಾಗುತ್ತದೆ. ಜೊತೆಗೆ ಇದರಿಂದ ತಲೆನೋವು, ಬಾಯಿ ಒಣಗುವುದು ಹಾಗೂ ದೇಹದ ಉಷ್ಣಾಂಶ ಹೆಚ್ಚುವುದು ಇಂತಹ ಸಮಸ್ಯೆಗಳು ಕಾಡಬಹುದು.
ಅತಿಯಾಗಿ ಉಪ್ಪಿನಾಂಶ ಸೇವನೆಯು ಬೇಸಿಗೆಯಲ್ಲಿ ಡೀಹೈಡ್ರೇಷನ್‌ಗೆ ಕಾರಣವಾಗಬಹುದು. ಇದರಿಂದ ಸುಸ್ತು, ಆಯಾಸ ಕೂಡ ಕಾಣಿಸಬಹುದು.