ಮಾವಿನಹಣ್ಣು ತಿಂದ ನಂತರ ತಪ್ಪಿಯೂ ಈ ಆಹಾರಗಳನ್ನು ಸೇವಿಸಬೇಡಿ, ಆರೋಗ್ಯ ಕೆಡುತ್ತೆ 

By Reshma
May 07, 2024

Hindustan Times
Kannada

ಬೇಸಿಗೆಕಾಲ ಎಂದರೆ ಹಣ್ಣುಗಳ ರಾಜ ಮಾವಿನ ಕಾಲ. ಈಗ ಮಾರುಕಟ್ಟೆಯಲ್ಲಿ ಎಲ್ಲೆಲ್ಲಿ ನೋಡಿದರೂ ಮಾವಿನಹಣ್ಣುಗಳೇ ಕಾಣುತ್ತವೆ. ಸಖತ್‌ ಟೇಸ್ಟಿ ಆಗಿರುವ ಮಾವಿನಹಣ್ಣು ಎಲ್ಲರಿಗೂ ಫೇವರಿಟ್‌. 

ಮಾವಿನಹಣ್ಣು ಕೇವಲ ರುಚಿ ಮಾತ್ರವಲ್ಲ, ಇದು ಹಲವು ಪೋಷಕಾಂಶಗಳ ಆಗರವಾಗಿದೆ. ಆದರೆ ಮಾವಿನಹಣ್ಣು ತಿಂದ ತಕ್ಷಣ ತಪ್ಪಿಯೂ ಈ ಆಹಾರಗಳನ್ನು ಸೇವಿಸಬಾರದು. ಇದರಿಂದ ಆರೋಗ್ಯ ಕೆಡಬಹುದು. 

ಹಾಗಾದರೆ ಮಾವಿನಹಣ್ಣು ತಿಂದ ನಂತರ ಯಾವೆಲ್ಲಾ ಪದಾರ್ಥಗಳನ್ನು ತಿನ್ನಬಾರದು ನೋಡಿ. 

ಮಾವಿನಹಣ್ಣು ತಿಂದ ತಕ್ಷಣ ಮೊಸರು ತಿನ್ನಬಾರದು. ಮಾವಿನಹಣ್ಣು ಹೀಟ್‌, ಮೊಸರು ತಂಪು. ಹಾಗಾಗಿ ಈ ಎರಡನ್ನೂ ಒಂದೇ ಸಮಯಕ್ಕೆ ಅಥವಾ ಮಾವು ತಿಂದು ಮೊಸರು ತಿನ್ನುವುದು ಕುಡಿಯವುದರಿಂದ ಆರೋಗ್ಯ ಸಮಸ್ಯೆ ಕಾಡಬಹುದು. 

ಮಾವಿನಹಣ್ಣು ತಿಂದ ನಂತರ ಹಾಗಲಕಾಯಿ ತಿನ್ನಬಾರದು. ಮಾವಿನಕಾಯಿ ತಿಂದ ತಕ್ಷಣ ಹಾಗಲಕಾಯಿ ತಿನ್ನುವುದರಿಂದ ವಾಕರಿಕೆ, ವಾಂತಿಯಂತಹ ಸಮಸ್ಯೆ ಎದುರಾಗಬಹುದು. 

ಮಾವು ತಿಂದ ನಂತರ ತಪ್ಪಿಯೂ ಹಾಲು ಕುಡಿಯಬಾರದು. 

ಮಾವಿನಹಣ್ಣು ತಿಂದ ತಕ್ಷಣ ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆ ಉಂಟಾಗಬಹುದು. ಇದು ಚರ್ಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. 

ಮಾವಿನಹಣ್ಣು ತಿಂದ ನಂತರ ಮಾಂಸಾಹಾರ ತಿನ್ನಬಾರದು. ಮಾವು ತಿಂದು ಕೋಳಿ, ಮೀನು, ಮೊಟ್ಟೆ ಇಂಥವನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗಬಹುದು. 

ಮಾವಿನಹಣ್ಣು ತಿಂದ ನಂತರ ಕೋಲ್ಡ್‌ ಡ್ರಿಂಕ್‌ ಕುಡಿಯಬಾರದು. ಜೊತೆಗೆ ಹೆಚ್ಚು ಸಕ್ಕರೆ ಇರುವ ಪದಾರ್ಥಗಳನ್ನು ಕೂಡ ತಿನ್ನುವುದನ್ನು ತಪ್ಪಿಸಬೇಕು. 

ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರಿಂದ ಸಲಹೆ ಪಡೆಯಬಹುದು. 

ರೇಷ್ಮೆಯಂತೆ ನುಣುಪಾದ ಕೇಶರಾಶಿ ನಿಮ್ಮದಾಗಲು ಮನೆಯಲ್ಲೇ ತಯಾರಿಸಿದ ಈ ಹೇರ್‌ಮಾಸ್ಕ್‌ ಬಳಸಿ