ಔಷಧ ರೂಪದಲ್ಲಿ ತುಳಸಿ ಸೇವಿಸುವ ಮುನ್ನ ಈ ಮಾಹಿತಿ ತಿಳ್ಕೊಳಿ, ಇಲ್ಲದಿದ್ರೆ ಅಪಾಯವೇ ಹೆಚ್ಚು

By Reshma
Apr 26, 2024

Hindustan Times
Kannada

ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ತುಳಸಿಗೆ ವಿಶೇಷ ಮಹತ್ವವಿದೆ. ಇದನ್ನು ಔಷಧಿಗಳ ಗಣಿ ಎಂದೂ ಕರೆಯುತ್ತಾರೆ. ಅನಾದಿ ಕಾಲದಿಂದಲೂ ಔಷಧಿ ರೂಪದಲ್ಲಿ ತುಳಸಿಯನ್ನು ಸೇವಿಸಲಾಗುತ್ತಿತ್ತು. 

ತುಳಸಿ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಶೀತ, ಕೆಮ್ಮು ನಿವಾರಣೆಗೂ ಉತ್ತಮ. ಜೀರ್ಣಕ್ರಿಯೆನ್ನು ಉತ್ತಮಗೊಳಿಸಿ, ನರಮಂಡಲವನ್ನು ಶಾಂತಗೊಳಿಸುವವರೆಗೆ ದೇಹ ಹಾಗೂ ಮನಸ್ಸಿಗೆ ತುಳಸಿಯ ಪ್ರಯೋಜನ ಹಲವು. 

ತುಳಸಿ ಎಲೆಗಳ ಬಳಕೆಯಿಂದ ಚರ್ಮದಲ್ಲಿರುವ ಕಲೆಗಳು, ಮೊಡವೆ, ಪಿಂಗ್ಮಟೇಷನ್‌ ನಿವಾರಣೆಯಾಗಿ ತ್ವಚೆಯ ಹೊಳಪು ಹೆಚ್ಚುತ್ತದೆ. ಇದನ್ನು ಫೇಸ್‌ಮಾಸ್ಕ್‌ ರೂಪದಲ್ಲೂ ಬಳಸಬಹುದು. 

ಪ್ರತಿದಿನ ಬೆಳಗೆದ್ದು ಒಂದೆರಡು ತುಳಸಿ ಎಲೆಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಆದರೆ ಇದನ್ನು ಸರಿಯಾದ ಕ್ರಮದಲ್ಲಿ ತಿನ್ನಬೇಕು. ಇಲ್ಲದಿದ್ದರೆ ತೊಂದರೆ ಖಚಿತ.

ತುಳಸಿ ಎಲೆಗಳು ಪಾದರಸವನ್ನು ಹೊಂದಿರುತ್ತವೆ. ಪ್ರತಿದಿನ ಇದನ್ನು ಅಗಿದು ತಿನ್ನುವುದರಿಂದ ಇದು ಹಲ್ಲುಗಳ ಪದರಕ್ಕೆ ಹಾನಿ ಮಾಡುತ್ತದೆ. 

ತುಳಸಿ ಎಲೆಗಳಿಂದ ಕಷಾಯ ಮಾಡಿ ಕುಡಿಯಬಹುದು ಅಥವಾ ಇದನ್ನು ಬಾಯಿಗೆ ಹಾಕಿಕೊಂಡು ನೀರಿನ ಜೊತೆ ನುಂಗಬಹುದು. ಇದು ಸರಿಯಾದ ಕ್ರಮ. 

ಪ್ರತಿದಿನ 4 ರಿಂದ 5 ತುಳಸಿ ಎಲೆಗಳನ್ನು ತಿನ್ನಬಹುದು. ಆರೋಗ್ಯಕ್ಕೆ ಉತ್ತಮ ಎಂದುಕೊಂಡು ಅತಿಯಾಗಿ ತಿನ್ನುವುದು ಸರಿಯಲ್ಲ. 

ಪ್ಲೇಆಫ್​ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ