ಪ್ರತಿದಿನ ಅರಿಸಿನದ ನೀರು ಕುಡಿಯುವುದರಿಂದ ದೇಹದಲ್ಲಾಗುವ ಅಚ್ಚರಿಯ ಬದಲಾವಣೆಗಳಿವು 

By Reshma
May 16, 2024

Hindustan Times
Kannada

ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಅರಿಸಿನಕ್ಕೆ ವಿಶೇಷ ಸ್ಥಾನವಿದೆ. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಬಿಸಿನೀರಿನೊಂದಿಗೆ ಅರಿಸಿನದ ಪುಡಿ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. 

ಪ್ರತಿದಿನ ಖಾಲಿಹೊಟ್ಟೆಯಲ್ಲಿ ಬಿಸಿ ನೀರಿಗೆ ಅರಿಸಿನದ ಪುಡಿ ಬೆರೆಸಿ ಕುಡಿಯುವುದರಿಂದ ಆಗುವ ಪ್ರಯೋಜನ ತಿಳಿಯಿರಿ.

ಬೆಚ್ಚಗಿನ ನೀರಿನಲ್ಲಿ ಅರಿಸಿನದ ಪುಡಿ ಬೆರೆಸಿ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಗಟ್ಟಬಹುದು. 

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಸಿನದ ನೀರು ಕುಡಿಯುವುದರಿಂದ ದೇಹದಲ್ಲಿ ಉರಿಯೂತ ನಿವಾರಣೆಯಾಗುತ್ತದೆ. 

ಅರಿಸಿನದ ನೀರು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದು ಮುಖದ ಮೇಲಿನ ಮೊಡವೆ ಹಾಗೂ ಚರ್ಮದ ತುರಿಕೆಯನ್ನು ನಿವಾರಿಸುತ್ತದೆ. ಇದು ಮುಖದ ಹೊಳಪು ಹೆಚ್ಚಲು ಸಹಕಾರಿ. 

ಅರಿಸಿನದ ಪುಡಿ ಯಕೃತ್ತಿನಿಂದ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ಯಕೃತ್ತಿನಲ್ಲಿ ಹಾನಿಗೊಳಗಾದ ಜೀವಕೋಶಗಳನ್ನು ಪುನರುಜ್ಜೀವಗೊಳಿಸುತ್ತದೆ ಮತ್ತು ಇದು ಯಕೃತ್ತನ್ನು ರಕ್ಷಿಸುತ್ತದೆ.

ಹೃದಯದ ಸಮಸ್ಯೆ ಇರುವವರು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಅರಿಸಿನ ನೀರು ಕುಡಿಯವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. 

ಐಪಿಎಲ್​ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಕ್ರಿಕೆಟಿಗರು