ವಿಟಮಿನ್ ಬಿ12 ಕೊರತೆಯಿಂದ ಎದುರಾಗುವ 7 ಪ್ರಮುಖ ಸಮಸ್ಯೆಗಳಿವು
By Reshma
Apr 17, 2024
Hindustan Times
Kannada
ದೇಹಕ್ಕೆ ವಿಟಮಿನ್ ಬಹಳ ಅಗತ್ಯ. ಎಲ್ಲಾ ರೀತಿಯ ವಿಟಮಿನ್‌ಗಳು ತಮ್ಮದೇ ಆದ ಕಾರ್ಯವನ್ನು ನಿಭಾಯಿಸುತ್ತವೆ. ವಿಟಮಿನ್ ಬಿ12 ಕೂಡ ದೇಹಕ್ಕೆ ತುಂಬಾನೇ ಅವಶ್ಯ.
ವಿಟಮಿನ್ 12 ಕೊರತೆ ಉಂಟಾಗುವುದು ಸಹಜ. ಇದರ ಬಗ್ಗೆ ಜನರಿಗೆ ಅರಿವಿಲ್ಲ. ಆದರೆ ಇದರ ಕೊರತೆಯಿಂದ ದೇಹದಲ್ಲಿ ಸಾಕಷ್ಟು ತೊಂದರೆಗಳು ಎದುರಾಗುತ್ತವೆ.
ವಿಟಮಿನ್ ಬಿ12 ಕೊರತೆ ಉಂಟಾದಾಗ ಎದುರಾಗುವ ಪ್ರಮುಖ ಸಮಸ್ಯೆಗಳಿವು.
ದೇಹದಲ್ಲಿ ವಿಟಮಿನ್ ಬಿ12 ಕೊರತೆಯು ರಕ್ತಹೀನತೆಗೆ ಕಾರಣವಾಗಬಹುದು. ದೇಹದಲ್ಲಿ ರಕ್ತದ ಕೊರತೆಯಿಂದ ಹಲವು ಸಮಸ್ಯೆಗಳು ಎದುರಾಗುತ್ತದೆ.
ವಿಟಮಿನ್ ಬಿ12 ಕೊರತೆಯು ಮೆದುಳಿನ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡುವಂತೆ ಮಾಡುತ್ತದೆ. ಇದು ಬುದ್ಧಿಮಾಂಧ್ಯತೆಗೂ ಕಾರಣವಾಗಬಹುದು. ಮರೆವಿನ ಕಾಯಿಲೆಯೂ ಕಾಣಿಸಬಹುದು.
ಇದರ ಕೊರತೆಯಿಂದ ಕೈ, ಕಾಲಿನಲ್ಲಿ ಜುಮ್ಮೆನ್ನಿಸುವುದು, ಮರಗಟ್ಟುವುದು ಇಂತಹ ಸಮಸ್ಯೆ ಉಂಟಾಗಬಹುದು.
ಇದ್ದಕ್ಕಿದ್ದಂತೆ ದೃಷ್ಟಿ ಮಂಜಾದರೆ, ಕನ್ನಡದ ನಂಬರ್ ಹೆಚ್ಚಾದರೆ ನೀವು ಅದನ್ನು ನಿರ್ಲಕ್ಷ್ಯ ಮಾಡಬೇಡಿ, ಅದಕ್ಕೆ ವಿಟಮಿನ್ ಬಿ12 ಕೊರತೆ ಕಾರಣ ಇರಬಹುದು.
ನಿರಂತರ ಬೆಂಬಿಡದ ತಲೆನೋವು ಕಾಡುತ್ತಿದ್ದರೆ ಅದಕ್ಕೂ ವಿಟಮಿನ್ ಬಿ12 ಕೊರತೆ ಕಾರಣವಾಗಬಹುದು.
ನಿರಂತರ ದಣಿವು, ವಿಶ್ರಾಂತಿ ತೆಗೆದುಕೊಂಡರೂ ಪದೇ ಪದೇ ದಣಿವಾಗುತ್ತಿದ್ದರೆ ಅದಕ್ಕೂ ವಿಟಮಿನ್ ಬಿ12 ಕೊರತೆ ಕಾರಣ.
ಇದರಿಂದ ವ್ಯಕ್ತಿಯು ದೈಹಿಕ ದೌರ್ಬಲ್ಯವನ್ನು ಅನುಭವಿಸುತ್ತಾನೆ. ಅಲ್ಲದೇ ಉಸಿರಾಟದ ಸಮಸ್ಯೆಯಂತಹ ಹಲವು ತೊಂದರೆಗಳು ಎದುರಾಗಬಹುದು.
ಈ ಸುದ್ದಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಂರ್ಪಕಿಸುವುದು ಉತ್ತಮ.
ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್ ಕಠಾರಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ