ದೇಹದಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಲು ಈ 7 ಅಂಶಗಳೇ ಪ್ರಮುಖ ಕಾರಣ
By Reshma May 01, 2024
Hindustan Times Kannada
ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ದೊಡ್ಡವರವರೆಗೆ ಹಲವರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳೂ ಎದುರಾಗುತ್ತಿದೆ.
ಬೊಜ್ಜಿನ ಕಾರಣದಿಂದ ತೂಕ ಹೆಚ್ಚಳದ ಸಮಸ್ಯೆಯೂ ಎದುರಾಗುತ್ತಿದೆ. ಬೊಜ್ಜು ಹಾಗೂ ತೂಕ ಹೆಚ್ಚಲು ಕಾರಣವಾಗುವ 7 ಪ್ರಮುಖ ಅಂಶಗಳಿವು.
ಅಸಮರ್ಪಕ ಆಹಾರ ಪದ್ಧತಿ: ಜಂಕ್‌ಫುಡ್ ಹಾಗೂ ಕರಿದ ಪದಾರ್ಥಗಳ ಸೇವನೆಯು ಬೊಜ್ಜು ಹೆಚ್ಚಲು ಪ್ರಮುಖ ಕಾರಣವಾಗಿದೆ. ಕೊಬ್ಬಿನಾಂಶ ಹಾಗೂ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ನಿರಂತರವಾಗಿ ಸೇವಿಸುವುದರಿಂದಲೂ ತೂಕ ಹೆಚ್ಚುತ್ತದೆ.
ದೈಹಿಕ ಚಟುವಟಿಕೆಯ ಕೊರತೆ, ಜಡಜೀವನ ಶೈಲಿಯ ಅನುಕರಣೆ ಇತ್ತೀಚಿಗೆ ಹಲವರಲ್ಲಿ ಬೊಜ್ಜು ಹಾಗೂ ತೂಕ ಹೆಚ್ಚಳು ಕಾರಣವಾಗುತ್ತಿದೆ. ವಾಕಿಂಗ್, ವ್ಯಾಯಾಮ ಮಾಡದೇ ಇರುವುದು ಇದಕ್ಕೆ ಪ್ರಮುಖ ಕಾರಣ.
ಸಂಶೋಧನೆಯ ಪ್ರಕಾರ 7 ಗಂಟೆಗಳಿಗಿಂತ ಕಡಿಮೆ ನಿದ್ದೆ ಮಾಡುವವರಲ್ಲಿ ತೂಕ ಹೆಚ್ಚಾಗುವ ಸಾಧ್ಯತೆ ಇದೆ. ಯಾವುದೇ ಮಧ್ಯ ವಯಸ್ಕ ವ್ಯಕ್ತಿಯು ದಿನದಲ್ಲಿ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಬೇಕು.
ತಜ್ಞರ ಪ್ರಕಾರ ಅತಿಯಾದ ಮದ್ಯಸೇವನೆಯು ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಲು ಕಾರಣವಾಗುತ್ತದೆ. ಏಕೆಂದರೆ ಆಲ್ಕೊಹಾಲ್ ಸೇವನೆಯು ಹಸಿವನ್ನು ಹೆಚ್ಚಿಸುತ್ತದೆ.
ಒತ್ತಡವು ಬೊಜ್ಜಿನಾಂಶ ಹೆಚ್ಚಲು ಪ್ರಮುಖ ಕಾರಣ. ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಬಿಡುಗಡೆಯ ಪ್ರಮಾಣವು ಅಧಿಕವಾಗುವುದರಿಂದ ಕೂಡ ತೂಕ ಹೆಚ್ಚಳವಾಗುತ್ತದೆ.
ಧೂಮಪಾನ ಕೂಡ ತೂಕ ಹಾಗೂ ಬೊಜ್ಜು ಹೆಚ್ಚಲು ಪರೋಕ್ಷ ಕಾರಣವಾಗಿದೆ.
ಕೆಲವರಿಗೆ ಅನುವಂಶಿಕವಾಗಿಯೂ ತೂಕ ಹೆಚ್ಚಬಹುದು. ಬೊಜ್ಜಿನ ಸಮಸ್ಯೆ ಕೂಡ ಪೋಷಕರಿಂದ ಮಕ್ಕಳಿಗೆ ಬರುತ್ತದೆ.
ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.
ಬಾಸಿಂಗ ತೊಟ್ಟ ಶ್ರಾವಣಿ; ಮದುಮಗಳ ಅಂದಕ್ಕೆ ಮನಸೋತ ವೀಕ್ಷಕರು