ನಮ್ಮ ಡಯೆಟ್‌ ಪ್ಲಾನ್‌ನಲ್ಲಿ ಇರಲೇಬೇಕಾದ 5 ಒಣಹಣ್ಣುಗಳಿವು 

By Reshma
Jul 07, 2024

Hindustan Times
Kannada

ನಮ್ಮ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಆಹಾರಗಳಲ್ಲಿ ಒಣಹಣ್ಣು ಹಾಗೂ ಬೀಜಗಳಿಗೆ ಅಗ್ರಸ್ಥಾನವಿದೆ. 

ಈ 5 ಒಣಹಣ್ಣುಗಳು ಹಾಗೂ ಬೀಜಗಳನ್ನು ನಮ್ಮ ಡಯೆಟ್‌ ಕ್ರಮದಲ್ಲಿ ತಪ್ಪದೇ ಸೇರಿಸಬೇಕು. ಇದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. 

ಬಾದಾಮಿ 

ಬಾದಾಮಿಯಲ್ಲಿ ವಿಟಮಿನ್‌ ಇ ಹಾಗೂ ಮೊನೊಸ್ಯಾಚುರೇಟೆಡ್‌ ಕೊಬ್ಬಿನಾಮ್ಲ ಹೇರಳವಾಗಿರುತ್ತದೆ. ಇದು ಅಂಗಾಂಶಗಳ ಹಾನಿಯನ್ನು ತಡೆದು, ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. 

ಕರ್ಜೂರ

ಕರ್ಜೂರದಲ್ಲಿ ನಾರಿನಾಂಶ ಹಾಗೂ ಅಗತ್ಯ ಪೋಷಕಾಂಶ ಸಮೃದ್ಧವಾಗಿರುತ್ತದೆ. ಇದು ಜೀರ್ಣಕ್ರಿಯೆ ವೃದ್ಧಿಯಾಗಲು ಸಹಾಯ ಮಾಡುತ್ತದೆ. 

ವಾಲ್‌ನಟ್‌

ವಾಲ್‌ನಟ್‌ನಲ್ಲಿ ಒಮೆಗಾ 3 ಕೊಬ್ಬಿನಾಮ್ಲ ಹೇರಳವಾಗಿದ್ದು, ಇದು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಹಸಿವನ್ನು ನಿಯಂತ್ರಿಸಿ, ತೂಕ ಹೆಚ್ಚಾಗುವುದನ್ನು ತಡೆಯುತ್ತದೆ. 

ಪಿಸ್ತಾ 

ಪಿಸ್ತಾದಲ್ಲಿ ಕ್ಯಾಲೊರಿ ಅಂಶ ಕಡಿಮೆ ಇರುತ್ತದೆ. ನಾರಿನಾಂಶ ಸಮೃದ್ಧವಾಗಿದ್ದು ಇದು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.

ಗೋಡಂಬಿ 

ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಗೋಡಂಬಿ ಸ್ನಾಯು ಸೆಳೆತವನ್ನು ನಿವಾರಿಸಿ, ತೂಕ ಹೆಚ್ಚಾಗುವುದನ್ನು ತಡೆಯುತ್ತದೆ. 

ಒಲಿಂಪಿಕ್ಸ್ ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರವಾಗಿದ್ದು ಯಾವಾಗ?