ಸಿಹಿಯಂಶ ಕಡಿಮೆ ಇರುವ, ತೂಕ ಇಳಿಸಲು ಸಹಾಯ ಮಾಡುವ 5 ಹಣ್ಣುಗಳಿವು

By Reshma
Apr 17, 2024

Hindustan Times
Kannada

ಹಣ್ಣುಗಳು ಆರೋಗ್ಯಕ್ಕೆ ಉತ್ತಮವಾದ್ರೂ ಕೆಲವು ಹಣ್ಣುಗಳಲ್ಲಿ ಸಕ್ಕರೆ ಅಂಶ ಅಧಿಕವಾಗಿರುವ ಕಾರಣ ಅವು ಕ್ಯಾಲೊರಿ ಅಂಶ ಹೆಚ್ಚಿ ತೂಕ ಹೆಚ್ಚುವಂತೆ ಮಾಡುತ್ತವೆ. ನಿಮ್ಮ ವೈಟ್‌ಲಾಸ್‌ ಜರ್ನಿಯಲ್ಲಿ ಸೇರಿಸಿಕೊಳ್ಳಬೇಕಾದ ಸಕ್ಕರೆ ಅಂಶ ಕಡಿಮೆ ಇರುವ ಹಣ್ಣುಗಳಿವು. 

ಸ್ಟ್ರಾಬೆರಿ: ಇದರಲ್ಲಿ ನಾರಿನಾಂಶ ಹೆಚ್ಚಿದ್ದು, ಸಕ್ಕರೆ ಅಂಶ ಕಡಿಮೆ ಇರುತ್ತದೆ. ಇದರಲ್ಲಿ ವಿಟಮಿನ್‌ ಸಿ ಸಮೃದ್ಧವಾಗಿದ್ದು ಚಯಾಪಚಯ ಕ್ರಿಯೆ ವೃದ್ಧಿಯಾಗಲು ಸಹಾಯ ಮಾಡುತ್ತದೆ. ಆ ಮೂಲಕ ತೂಕ ಇಳಿಕೆಗೆ ನೆರವಾಗುತ್ತದೆ.

ಕಿವಿ: ಕಿವಿಹಣ್ಣಿನಲ್ಲಿ ವಿಟಮಿನ್‌ ಸಿ ಸಮೃದ್ಧವಾಗಿದ್ದು, ಸಕ್ಕರೆಯಂಶ ಕಡಿಮೆ ಇರುತ್ತದೆ. ಇವು ತೂಕ ಇಳಿಕೆಗೆ ಹೇಳಿ ಮಾಡಿಸಿದ ಹಣ್ಣು ಎನ್ನುವುದರಲ್ಲಿ ಅನುಮಾನವಿಲ್ಲ. ಇದು ಚಯಾಪಚಯವನ್ನು ಹೆಚ್ಚಿಸಿ, ತೂಕ ಇಳಿಕೆಗೆ ನೆರವಾಗುತ್ತದೆ. 

ಚಕ್ಕೊತಾ: ಚಕ್ಕೊತಾ ಹಣ್ಣಿನಲ್ಲಿ ಸಕ್ಕರೆಯಂಶ ಕಡಿಮೆ ಇರುತ್ತದೆ. ನಾರಿನಾಂಶ, ವಿಟಮಿನ್‌ ಸಿ, ಸಿಟ್ರಿಕ್‌ ಆಸಿಡ್‌ ಹೇರಳವಾಗಿರುವ ಕಾರಣ ಇದು ಜೀರ್ಣಕ್ರಿಯೆಯನ್ನು ವೃದ್ಧಿಸಿ ತೂಕ ಇಳಿಯಲು ಸಹಾಯ ಮಾಡುತ್ತದೆ. 

ಕಿತ್ತಳೆ: ಕಿತ್ತಳೆ ಹಣ್ಣಿನಲ್ಲಿ ವಿಟಮಿನ್‌ ಸಿ ಹಾಗೂ ನಾರಿನಾಂಶ ಸಮೃದ್ಧವಾಗಿದ್ದು, ಇದು ಕ್ಯಾಲೊರಿ ಸೇವನೆಗೆ ಕಡಿವಾಣ ಹಾಕುತ್ತದೆ. ಇದು ತೂಕ ಇಳಿಕೆಗೆ ಸಹಾಯ ಮಾಡುವ ಜೊತೆಗೆ ರಕ್ತದಲ್ಲಿನ ಸಕ್ಕರೆ ಅಂಶದ ನಿಯಂತ್ರಣಕ್ಕೂ ಕಾರಣವಾಗುತ್ತದೆ. 

ಅವಕಾಡೊ: ಬೆಣ್ಣೆಹಣ್ಣು ಎಂದು ಕರೆಯುವ ಅವಕಾಡೊದಲ್ಲಿ ಸಕ್ಕರೆ ಅಂಶ ಕಡಿಮೆ ಇದ್ದು, ನಾರಿನಾಂಶ ಸಮೃದ್ಧವಾಗಿರುತ್ತದೆ. ಇದರಲ್ಲಿರುವ ಒಲಿಸಿಕ್‌ ಆಸಿಡ್‌ ಜೀರ್ಣಕ್ರಿಯೆಯನ್ನು ವೃದ್ಧಿಸಿ, ಚಯಾಪಚಯಕ್ಕೆ ಸಹಾಯ ಮಾಡುತ್ತದೆ. ಆ ಮೂಲಕ ತೂಕ ಇಳಿಕೆಗೆ ನೆರವಾಗುತ್ತದೆ. 

ಐಪಿಎಲ್ 2024ರ ಟಾಪ್ 5 ಅತಿ ಉದ್ದದ ಸಿಕ್ಸರ್