ಚಂದ್ರ ನಮಸ್ಕಾರ ಎಂದರೇನು, ಆರೋಗ್ಯಕ್ಕೆ ಇದರ ಪ್ರಯೋಜನಗಳೇನು ತಿಳಿಯಿರಿ 

By Reshma
Jun 11, 2024

Hindustan Times
Kannada

ಚಂದ್ರ ನಮಸ್ಕಾರ ಎಂಬುದು ಒಂದು ಯೋಗ ಭಂಗಿಯಾಗಿದ್ದು ಇದು ಸಂಪೂರ್ಣ ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಉತ್ತಮ ನಿದ್ದೆ ಹಾಗೂ ಮಾನಸಿಕ ಶಾಂತಿಗಾಗಿ ಈ ಯೋಗಾಸನವನ್ನು ಮಾಡಬೇಕು. ಇದರ ಇನ್ನಿತರ ಪ್ರಯೋಜನ ತಿಳಿಯಿರಿ. 

ಚಂದ್ರ ನಮಸ್ಕಾರವು ಮುಖ್ಯವಾಗಿ ಉಸಿರಾಟವನ್ನು ಉತ್ತೇಜಿಸುತ್ತದೆ. ಇದು ನಮ್ಮ ನರಮಂಡಲದಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಸಹಕಾರಿ. 

ಈ ಯೋಗಭಂಗಿಯು ದೇಹದ ಶಕ್ತಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಚಂದ್ರನು ಶಾಂತಿಗೆ ಸಂಬಂಧಿಸಿದವನು. ಈ ಭಂಗಿಯು ದೈಹಿಕ ಶಾಖವನ್ನು ಸಮತೋಲನಗೊಳಿಸುತ್ತದೆ. 

ಈ ಭಂಗಿಯು ಸ್ನಾಯುಗಳನ್ನು ಹಿಗ್ಗಿಸುತ್ತದೆ. ಕೀಲುಗಳು ಮತ್ತು ಚಲನೆಯ ವ್ಯಾಪ್ತಿಯನ್ನು ಸುಧಾರಿಸುತ್ತದೆ. ಸ್ನಾಯುಗಳನ್ನು ಸಡಿಲ ಮಾಡುತ್ತದೆ. ಇದು ದೇಹದ ಬಿಗಿತವನ್ನು ಕಡಿಮೆ ಮಾಡುತ್ತದೆ. 

ಇದು ಅಂತಃಸ್ರಾವಕ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಇದು ನಮ್ಮ ದೇಹದ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ. ಮುಖ್ಯವಾಗಿ ಮಹಿಳೆಯರಲ್ಲಿ ಹಾರ್ಮೋನ್‌ ಮಟ್ಟವನ್ನು ಸಮತೋಲನಗೊಳಿಸುತ್ತದೆ. 

ಚಂದ್ರ ನಮಸ್ಕಾರವು ಜೀರ್ಣಾಂಗವ್ಯೂಹದ ಆರೋಗ್ಯವನ್ನು ವೃದ್ಧಿಸುತ್ತದೆ. ಇದು ಕಿಬ್ಬೊಟ್ಟೆಯ ಅಂಗಗಳ ಆರೋಗ್ಯವನ್ನು ಉತ್ತೇಜಿಸುತ್ತದೆ. 

ಈ ಯೋಗಾಸನವು ಉತ್ತಮ ನಿದ್ದೆಯ ಭಂಗಿಗೆ ಸಹಕರಿಸುತ್ತದೆ. ಇದು ನಮ್ಮ ದೇಹ ಹಾಗೂ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ. ಆ ಮೂಲಕ ನಿದ್ರಾಹೀನತೆಯನ್ನು ತಡೆಯುತ್ತದೆ. 

ಚಂದ್ರ ನಮಸ್ಕಾರವು ಉತ್ತಮ ಭಾವನಾತ್ಮಕ ಸ್ಥಿರತೆಯೊಂದಿಗೆ ಸ್ವಯಂ ಅರಿವಿನ ಪ್ರಜ್ಞೆಯನ್ನು ವೃದ್ಧಿಸುತ್ತದೆ. ದೇಹ, ಮನಸ್ಸು ಹಾಗೂ ಭಾವನೆಗಳ ಸಂಪರ್ಕವನ್ನು ಅಭ್ಯಾಸ ಮಾಡುತ್ತದೆ. 

ಈ ಯೋಗಾಸದ ಬ್ಯಾಕ್‌ ಸ್ಟ್ರೆಚಿಂಗ್‌ ಭಂಗಿಯು ಬೆನ್ನು ಮೂಳೆಗಳ ಸುಧಾರಣೆಗೆ ಸಹಾಯ ಮಾಡುತ್ತದೆ. ಮೊಣಕೈ, ಸೊಂಟ ಮತ್ತು ಕುತ್ತಿಗೆಯ ಹಿಂಭಾಗದ ಸ್ನಾಯುಗಳನ್ನು ಆರಾಮಗೊಳಿಸುತ್ತದೆ. 

ಭಾರತ ತಂಡದ ಫೀಲ್ಡಿಂಗ್​ ಕೋಚ್​ ಸ್ಥಾನಕ್ಕೆ ದಿಗ್ಗಜನ ಎಂಟ್ರಿ?