ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದರಿಂದ ಉಂಟಾಗುವ ಅಡ್ಡಪರಿಣಾಮಗಳಿವು
Pexels
By Priyanka Gowda Sep 05, 2024
Hindustan Times Kannada
ಅನೇಕರಿಗೆ ಬೆಳಗ್ಗೆದ್ದ ಕೂಡಲೇ ಕಾಫಿ ಹೀರದಿದ್ದರೆ ದಿನ ಶುರುವಾಗುವುದೇ ಇಲ್ಲ. ಖಾಲಿ ಹೊಟ್ಟೆಯಲ್ಲಿ ಕಾಫಿ ಹೀರುವುದರಿಂದ ಕೆಲವು ಅಡ್ಡಪರಿಣಾಮಗಳು ಉಂಟಾಗುತ್ತವೆ.
pixa bay
ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು ಅಜೀರ್ಣಕ್ಕೆ ಕಾರಣವಾಗಬಹುದು. ಪೋಷಕಾಂಶಗಳನ್ನು ಹೀರಿಕೊಳ್ಳುವ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಬಹುದು.
Pexels
ಕೆಫೀನ್ ಅಂಶ ಅಡಕವಾಗಿರುವುದರಿಂದ ಈ ಅಭ್ಯಾಸವನ್ನು ಹೊಂದಿರುವವರಿಗೆ ಅಸಿಡಿಟಿ ಸಮಸ್ಯೆ, ಒತ್ತಡಕ್ಕೂ ಕಾರಣವಾಗಬಹುದು.
Pexels
ದೈನಂದಿನ ಚಟುವಟಿಕೆಗಳ ಮೇಲೂ ಪರಿಣಾಮ ಬೀರಬಹುದು. ಕಾಲಾನಂತರದಲ್ಲಿ, ಜಠರದುರಿತ ಅಥವಾ ಜಠರ ಹುಣ್ಣುಗಳಂತಹ ಗಂಭೀರ ಅನಾರೋಗ್ಯ ಪರಿಸ್ಥಿತಿ ಎದುರಾಗಬಹುದು.
Pexels
ಕೆಫೀನ್ ಮತ್ತು ಹೆಚ್ಚಿನ ಆಮ್ಲೀಯತೆಯ ಮಟ್ಟಗಳ ಸಂಯೋಜನೆಯು ಹೊಟ್ಟೆಯ ಒಳಪದರವನ್ನು ಕೆರಳಿಸಬಹುದು. ಇದು ಅಸ್ವಸ್ಥತೆ, ಎದೆಯುರಿ ಇತ್ಯಾದಿಗೆ ಕಾರಣವಾಗಬಹುದು.
Pexels
ಜೀರ್ಣಕಾರಿ ಸಮಸ್ಯೆ ಇರುವವರು ಕಾಫಿ ಕುಡಿಯುವುದರಿಂದ ಸಮಸ್ಯೆ ಉಲ್ಬಣಗೊಳ್ಳಬಹುದು. ಅತಿಸಾರ ಅಥವಾ ಹೊಟ್ಟೆ ಸೆಳೆತವನ್ನು ಉಂಟುಮಾಡಬಹುದು.
Pexels
ಕಾಫಿಯಲ್ಲಿ ಟ್ಯಾನಿನ್ ಎಂಬ ಸಂಯುಕ್ತಗಳಿವೆ. ಕಬ್ಬಿಣ ಮತ್ತು ಕ್ಯಾಲ್ಸಿಯಂ ಸೇರಿದಂತೆ ಕೆಲವು ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಇದು ಅಡ್ಡಿಪಡಿಸಬಹುದು.
Pexels
ತೂಕ ಹೆಚ್ಚಾಗುವುದು ಅಥವಾ ಮಾನಸಿಕ ಅಸ್ವಸ್ಥತೆಗಳಿಗೂ ಕಾರಣವಾಗಬಹುದು. ಪ್ರತಿರಕ್ಷಣಾ ಕಾರ್ಯವೂ ದುರ್ಬಲಗೊಳ್ಳಬಹುದು.
Pexels
ಕೆಫೀನ್ ಇನ್ಸುಲಿನ್ ಸೂಕ್ಷ್ಮತೆ ಮತ್ತು ಗ್ಲೂಕೋಸ್ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರಿಳಿತಗಳಿಗೆ ಕಾರಣವಾಗುತ್ತದೆ.
Pexels
ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆಯು ನಿರ್ಜಲೀಕರಣವನ್ನು ಹೆಚ್ಚಿಸುತ್ತದೆ. ಇದು ತಲೆನೋವು, ತಲೆತಿರುಗುವಿಕೆ ಮತ್ತು ಆಯಾಸವನ್ನು ಉಂಟುಮಾಡುತ್ತದೆ. ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ