ನಿದ್ದೆ ಕೊರತೆಗೆ ರಾತ್ರಿ ಮಲಗುವ ಮುನ್ನ ನಾವು ಮಾಡುವ ಈ ತಪ್ಪುಗಳೇ ಕಾರಣ
By Reshma Jun 28, 2024
Hindustan Times Kannada
ಆರೋಗ್ಯಕರ ಜೀವನಶೈಲಿಗಾಗಿ ಉತ್ತಮ ನಿದ್ದೆ ಬಹಳ ಮುಖ್ಯ. ಆದರೆ ಮಲಗಿದ ತಕ್ಷಣ ನಿದ್ದೆ ಬರಬೇಕು ಅಂದ್ರೆ ರಾತ್ರಿಯ ದಿನಚರಿ ಸರಿಯಿರಬೇಕು. ಮಲಗುವ ಮುನ್ನ ಇ 5 ತಪ್ಪುಗಳನ್ನು ಎಂದಿಗೂ ಮಾಡಬಾರದು.
ತಡವಾಗಿ ತಿನ್ನುವುದು
ಕ್ಯಾಲೊರಿ ಅಂಶ ಅಧಿಕ ಇರುವ ಆಹಾರಗಳನ್ನು ತಡರಾತ್ರಿ ತಿನ್ನುವುದು ನಿದ್ದೆಗೆ ಅಡ್ಡಿಪಡಿಸುತ್ತದೆ. ಇದು ತೂಕ ಹೆಚ್ಚಲು ಕಾರಣವಾಗುತ್ತದೆ.
ಮಲಗುವ ಮುನ್ನ ಮೊಬೈಲ್, ಲ್ಯಾಪ್‌ಟಾಪ್ ನೋಡುವುದು
ರಾತ್ರಿ ಮಲಗುವ ಮುನ್ನ ಅತಿನೇರಳೆ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ದೇಹದ ಸಿರ್ಕಾಡಿಯಂ ರಿದಂ ಮೇಲೆ ಪರಿಣಾಮ ಬೀರುತ್ತದೆ. ಇದು ಗುಣಮಟ್ಟದ ನಿದ್ದೆಗೂ ಅಡ್ಡಿಪಡಿಸುತ್ತದೆ.
ಕೆಫಿನ್ ಅಂಶ ಇರುವ ಆಹಾರ ಸೇವನೆ
ರಾತ್ರಿ ಮಲಗುವ ಸಮಯದಲ್ಲಿ ಕೆಫಿನ್ ಅಂಶ ಇರುವ ಪಾನೀಯಗಳ ಸೇವನೆಯು ದೇಹದಲ್ಲಿ ಮೆಲಟೊನಿನ್ ಅಂಶದ ಮೇಲೆ ಪರಿಣಾಮ ಬೀರುತ್ತದೆ. ಇದು ನಿಮ್ಮನ್ನು ಎಚ್ಚರವಾಗಿರುವಂತೆ ಮಾಡುತ್ತದೆ. ಅಧ್ಯಯನಗಳ ಪ್ರಕಾರ ಮಲಗಲು ಕನಿಷ್ಠ 5 ಗಂಟೆಗೂ ಮೊದಲು ಕೆಫಿನ್ ಅಂಶ ಇರುವ ಪಾನೀಯ ಸೇವಿಸಬೇಕು.
ಅತಿಯಾದ ವರ್ಕೌಟ್
ಸಂಜೆ ಅಥವಾ ರಾತ್ರಿ ಹಗುರ ಅಥವಾ ಮಧ್ಯಮ ಪ್ರಮಾಣದ ವ್ಯಾಯಾಮಗಳು ಓಕೆ, ಆದರೆ ಅತಿಯಾಗಿ ದೇಹದಂಡಿಸುವ ವ್ಯಾಯಾಮಗಳನ್ನು ಮಾಡುವುದು ಕೂಡ ತಪ್ಪು, ಇದರಿಂದಲೂ ನಿದ್ದೆಗೆ ತೊಂದರೆಯಾಗುತ್ತದೆ.
ಆಲ್ಕೋಹಾಲ್ ಸೇವನೆ
ರಾತ್ರಿ ಮಲಗುವ ಮುನ್ನ ಮದ್ಯಪಾನ ಸೇವಿಸುವುದು ಕೂಡ ನಿದ್ದೆಗೆ ಅಡ್ಡಿ ಪಡಿಸುತ್ತದೆ. ಇದು ನಿಮಗೆ ಸುಸ್ತು ಮಾಡಿ, ಸರಿಯಾಗಿ ನಿದ್ದೆ ಬಾರದಂತೆ ಮಾಡುತ್ತದೆ.
ಪುಷ್ಪ 2 ಡಿಸೆಂಬರ್ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ