ರಾತ್ರಿ 10 ಗಂಟೆಗೂ ಮುನ್ನ ಮಲಗುವುದರಿಂದಾಗುವ ಅದ್ಭುತ ಪ್ರಯೋಜನಗಳು 

By Reshma
Sep 03, 2024

Hindustan Times
Kannada

ಆರೋಗ್ಯದ ದೃಷ್ಟಿಯಿಂದ ರಾತ್ರಿ ಬೇಗ ಮಲಗಿ, ಬೆಳಿಗ್ಗೆ ಬೇಗ ಏಳುವುದು ಉತ್ತಮ ಅಭ್ಯಾಸ. 

ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಈ ಅಭ್ಯಾಸವನ್ನು ಪಾಲಿಸುತ್ತಿದ್ದರು.

ಕೆಲವರು ರಾತ್ರಿ 10 ಗಂಟೆ ಒಳಗೆ ಮಲಗಿ ಬೆಳಿಗ್ಗೆ 6 ಗಂಟೆ ಒಳಗೆ ಎದ್ದೇಳುತ್ತಾರೆ.

ಈ ಮಲಗುವ ಮಾದರಿಯು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪ್ರತಿದಿನ ರಾತ್ರಿ 10 ಗಂಟೆಗೆ ಮಲಗುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನ ತಿಳಿಯಿರಿ 

ರಾತ್ರಿ 10 ಗಂಟೆಗೂ ಮುನ್ನ ಮಲಗಿ, ಬೆಳಿಗ್ಗೆ ಬೇಗ ಏಳುವುದರಿಂದ ನಿಮ್ಮ ದೈಹಿಕ ಸಾಮರ್ಥ್ಯ ವೃದ್ಧಿಸುತ್ತದೆ. ಇದರಿಂದ ಪ್ರತಿದಿ ಸರಿಯಾದ ಸಮಯಕ್ಕೆ ಯೋಗ, ವ್ಯಾಯಾಮ ಮಾಡಬಹುದು 

ಪ್ರತಿದಿನ 10 ಗಂಟೆಗೂ ಮುನ್ನ ಮಲಗಿ 6ಗೂ ಮೊದಲು ಏಳುವುದರಿಂದ ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುತ್ತವೆ. ಇದರಿಂದ ದೇಹವು ಚೈತನ್ಯದಿಂದ ಕೂಡಿರುತ್ತದೆ. ಇದರಿಂದ ಮೈಂಡ್ ಫ್ರೆಶ್ ಆಗಿರುತ್ತದೆ 

ಪ್ರತಿದಿನ ರಾತ್ರಿ 10 ಗಂಟೆಗೂ ಮುನ್ನ ಮಲಗಿ ಬೆಳಿಗ್ಗೆ 6 ಗಂಟೆಗೂ ಮುನ್ನ ಏಳುವುದು ನಿಮ್ಮ ನಿದ್ದೆಯ ಚಕ್ರವನ್ನು ಸುಧಾರಿಸುತ್ತದೆ

ಬೇಗನೆ ಮಲಗುವುದರಿಂದ ನಿದ್ದೆಯ ಚಕ್ರ ಸುಧಾರಿಸುತ್ತದೆ. ಇದರಿಂದ ನಿದ್ರಾಹೀನತೆಯಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು

ನಿದ್ರಾಹೀನತೆಯು ಅನೇಕ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ರಾತ್ರಿ 10 ಗಂಟೆಗೆ ಮಲಗಿ ಬೇಗ ಏಳುವುದರಿಂದ ಅನಾರೋಗ್ಯದ ಪ್ರಮಾಣವನ್ನು ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು 

ಈ ಸುದ್ದಿಯ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ 

ವಾಸ್ತು ಪ್ರಕಾರ ನಟಿ ಐಶಾನಿ ಶೆಟ್ಟಿಯ ಹೊಸ ಫೋಟೋಶೂಟ್‌