ದೇಹವನ್ನು ಬಲಪಡಿಸುವ 6 ಪ್ರೊಟೀನ್ ಸಮೃದ್ಧ ಹಣ್ಣುಗಳು 

By Reshma
Jan 21, 2025

Hindustan Times
Kannada

ಸ್ನಾಯುಗಳ ಶಕ್ತಿ, ಜೀವಕೋಶಗಳ ಆರೋಗ್ಯ ಮತ್ತು ಹಾರ್ಮೋನ್ ಉತ್ಪಾದನೆ ಸೇರಿದಂತೆ ದೇಹದಲ್ಲಿನ ಹಲವು ಪ್ರಮುಖ ಕಾರ್ಯಗಳಿಗೆ ಪ್ರೊಟೀನ್ ಅವಶ್ಯವಾಗಿದೆ. ಅದಕ್ಕಾಗಿ ನಿಯಮಿತವಾಗಿ ಪ್ರೊಟೀನ್ ಸಮೃದ್ಧ ಆಹಾರ ಸೇವಿಸಬೇಕು. ಕೆಲವು ಹಣ್ಣುಗಳಲ್ಲಿ ಪ್ರೊಟೀನ್‌ನಲ್ಲಿ ಸಮೃದ್ಧವಾಗಿವೆ. ಅಂತಹ 6 ಹಣ್ಣುಗಳು ಇಲ್ಲಿವೆ 

Photo: Pexels

ಪೇರಳೆ ಹಣ್ಣಿನಲ್ಲಿ ಪ್ರೊಟೀನ್ ಹೇರಳವಾಗಿದೆ. ಒಂದು ಕಪ್ ಪೇರಳೆಯಲ್ಲಿ ಸುಮಾರು 4.2 ಗ್ರಾಂ ಪ್ರೊಟೀನ್ ಇರುತ್ತದೆ. ಇದರಲ್ಲಿ ನಾರಿನಾಂಶ ಕೂಡ ಸಮೃದ್ಧವಾಗಿದೆ 

Photo: Pexels

100 ಗ್ರಾಂ ಆವಕಾಡೊದಲ್ಲಿ 2 ಗ್ರಾಂ ಪ್ರೊಟೀನ್ ಇರುತ್ತದೆ. ಇದರಲ್ಲಿ ಆರೋಗ್ಯಕರ ಕೊಬ್ಬು ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ

Photo: Pexels

ಕಿವಿ ಹಣ್ಣುಗಳಲ್ಲಿ ಕೂಡ ಪ್ರೊಟೀನ್ ಅಧಿಕವಾಗಿರುತ್ತದೆ. 100 ಗ್ರಾಂ ಕಿವಿಯಲ್ಲಿ 1.1 ಗ್ರಾಂ ಪ್ರೊಟೀನ್ ಇರುತ್ತದೆ. ಕಿವಿ ಹಣ್ಣು ವಿಟಮಿನ್ ಸಿ ಸೇರಿದಂತೆ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದೆ 

Photo: Pexels

ಒಂದು ಮಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ 1.1 ರಿಂದ 1.5 ಗ್ರಾಂ ಪ್ರೊಟೀನ್ ಇರುತ್ತದೆ. ಈ ಹಣ್ಣಿನಲ್ಲಿ ಪೊಟ್ಯಾಸಿಯಮ್ ಕೂಡ ಅಧಿಕವಾಗಿದೆ 

Photo: Pexels

100 ಗ್ರಾಂ ಬ್ಲ್ಯಾಕ್‌ಬೆರಿಯಲ್ಲಿ ಸುಮಾರು 1.4 ಗ್ರಾಂ ಪ್ರೊಟೀನ್ ಇರುತ್ತವೆ. ಸ್ಟ್ರಾಬೆರಿಗಳು ಮತ್ತು ರಾಸ್‌ಬೆರ್ರಿ ಕೂಡ ಬಹುತೇಕ ಒಂದೇ ಪ್ರಮಾಣದ ಪ್ರೊಟೀನ್ ಅನ್ನು ಹೊಂದಿರುತ್ತವೆ 

Photo: Pexels

ದಾಳಿಂಬೆಯಲ್ಲಿ ಕೂಡ ಪ್ರೊಟೀನ್ ಸಮೃದ್ಧವಾಗಿದೆ. 100 ಗ್ರಾಂ ದಾಳಿಂಬೆ ಬೀಜಗಳಲ್ಲಿ ಸುಮಾರು 1.7 ಗ್ರಾಂ ಪ್ರೊಟೀನ್ ಇರುತ್ತದೆ. ಈ ಹಣ್ಣು ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ 

Photo: Pexels

ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ 

ಹೆಚ್ಚಿನ ಉಷ್ಣಾಂಶ ಇರುವ ಕರ್ನಾಟಕದ ಪ್ರಮುಖ ನಗರಗಳು