ಪಾದಕ್ಕೆ ತುಪ್ಪ ಹಚ್ಚಿ ಮಸಾಜ್ ಮಾಡುವುದರಿಂದಾಗುವ 7 ಅದ್ಭುತ ಪ್ರಯೋಜನಗಳಿವು 

By Reshma
Jan 21, 2025

Hindustan Times
Kannada

ಶತಮಾನಗಳಿಂದಲೂ ಆರ್ಯುವೇದದಲ್ಲಿ ತುಪ್ಪವನ್ನು ಬಳಸಲಾಗುತ್ತಿದೆ. ಇದನ್ನು ತಿನ್ನುವುದು ಮಾತ್ರವಲ್ಲ, ದೇಹದ ವಿವಿಧ ಭಾಗಗಳಿಗೆ ಮಸಾಜ್ ಮಾಡುವುದರಿಂದಲೂ ಸಾಕಷ್ಟು ಪ್ರಯೋಜನಗಳಿವೆ 

ಪಾದಗಳಿಗೆ ತುಪ್ಪವನ್ನು ಹಚ್ಚಿ ಮಸಾಜ್ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋಣ 

ಪಾದಗಳಿಗೆ ತುಪ್ಪ ಹಚ್ಚುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದ ಆಯಾಸವೂ ಕಡಿಮೆಯಾಗಿ, ಚೆನ್ನಾಗಿ ನಿದ್ದೆ ಬರುತ್ತದೆ 

ತುಪ್ಪದಲ್ಲಿರುವ ಕೊಬ್ಬಿನಾಮ್ಲವು ಚರ್ಮವನ್ನು ಮೃದುವಾಗಿಸಿ, ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ 

ತುಪ್ಪದ ನಿಯಮಿತ ಬಳಕೆಯು ಪಾದಗಳಲ್ಲಿನ ಊತ ಮತ್ತು ಸುಡುವ ಸಂವೇದನೆಯಿಂದ ಪರಿಹಾರ ನೀಡುತ್ತದೆ 

ತುಪ್ಪವನ್ನು ಹಚ್ಚುವುದರಿಂದ ಹಿಮ್ಮಡಿ ಒಡೆಯುವ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದು. ಇದರಿಂದ ಪಾದದ ಬಿರುಕು ನಿವಾರಣೆಯಾಗುತ್ತದೆ

ಪಾದಗಳಿಗೆ ತುಪ್ಪ ಹಚ್ಚಿ ಮಸಾಜ್ ಮಾಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ 

ಪಾದಕ್ಕೆ ತುಪ್ಪ ಹಚ್ಚುವುದರಿಂದ ಮೂಳೆಗಳು ಬಲಗೊಳ್ಳುತ್ತವೆ 

ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ 

ಜಿಎಸ್‌ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು