ಪ್ರತಿದಿನ ವೀಳ್ಯದೆಲೆ ಜಗಿಯುವುದರಿಂದ ಆರೋಗ್ಯಕ್ಕಾಗುವ 7 ಪ್ರಯೋಜನಗಳಿವು

By Reshma
Aug 26, 2024

Hindustan Times
Kannada

ಹಲವರಿಗೆ ಪ್ರತಿದಿನ ಊಟದ ನಂತರ ವೀಳ್ಯದೆಲೆ ತಿನ್ನುವ ಅಭ್ಯಾಸವಿದೆ. ಇದು ಖಂಡಿತ ಒಳ್ಳೆಯ ಅಭ್ಯಾಸ 

ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳು ವೀಳ್ಯದೆಲೆಯಲ್ಲಿ ಹೇರಳವಾಗಿವೆ. ಆ ಕಾರಣಕ್ಕೆ ನಿತ್ಯವೂ ವೀಳದ್ಯೆಲೆ ಜಗಿಯಬೇಕು ಎನ್ನುತ್ತಾರೆ

ಪ್ರತಿದಿನ ವೀಳ್ಯದೆಲೆ ಜಗಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ 

ವೀಳ್ಯದೆಲೆ ಮೌತ್‌ ಫ್ರೆಶನರ್ ಆಗಿ ಕಾರ್ಯನಿರ್ವಹಿಸುತ್ತದೆ. ಪ್ರತಿದಿನ ವೀಳ್ಯದೆಲೆ ತಿನ್ನುವುದರಿಂದ ಬಾಯಿಯ ದುರ್ವಾಸನೆ ದೂರಾಗುತ್ತದೆ 

ಪ್ರತಿನಿತ್ಯ ವೀಳ್ಯದೆಲೆ ಜಗಿದು ರಸ ನುಂಗುವುದರಿಂದ ಶೀತ ಮತ್ತು ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು

ಪ್ರತಿದಿನ ವೀಳದ್ಯೆಲೆ ರಸ ಸೇವಿಸುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಇದರಲ್ಲಿ ಪೋಷಕಾಂಶ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ 

ವೀಳದ್ಯೆಲೆಯಲ್ಲಿ ಕಂಡುಬರುವ ಪೋಷಕಾಂಶಗಳು ಚಯಾಪಚಯವನ್ನು ಹೆಚ್ಚಿಸಲು ಹಾಗೂ ತೂಕ ಇಳಿಸಲು ಸಹಾಯ ಮಾಡುತ್ತವೆ

ಪ್ರತಿದಿನ ವೀಳದ್ಯೆಲೆ ತಿನ್ನುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಇದರಿಂದ ಅನಾರೋಗ್ಯದ ಪ್ರಮಾಣ ಕಡಿಮೆಯಾಗುತ್ತದೆ 

ಮಲಬದ್ಧತೆ, ಆಮ್ಲೀಯತೆ ಮುಂತಾದ ಜೀರ್ಣಕಾರಿ ತೊಂದರೆ ಇದ್ದರೆ ವೀಳ್ಯದೆಲೆ ತಿನ್ನಬಹುದು. ಇವು ಮಲಬದ್ಧತೆ ನಿವಾರಣೆಗೂ ಸಹಕಾರಿ

ಈ ಸುದ್ದಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ

ಹಲ್ಲುಗಳ ಮೇಲಿರುವ ಹಳದಿ ಕಲೆಗಳನ್ನು ಹೋಗಲಾಡಿಸಲು ಇಲ್ಲಿದೆ ಮನೆಮದ್ದು

freepik