15 ದಿನಗಳ ಕಾಲ ಪ್ರತಿದಿನ ಏಲಕ್ಕಿ ಜಗಿದರೆ ಆರೋಗ್ಯದಲ್ಲಿ ಇಷ್ಟೆಲ್ಲಾ ಬದಲಾವಣೆಗಳಾಗತ್ತೆ 

By Reshma
Sep 25, 2024

Hindustan Times
Kannada

ಏಲಕ್ಕಿಯಲ್ಲಿ ಅಗಾಧ ಪೋಷಕಾಂಶಗಳಿವೆ. ರೈಬೋಫ್ಲಾವಿನ್‌, ನಿಯಾಸಿನ್‌, ವಿಟಮಿನ್ ಸಿ, ಖನಿಜಗಳು, ಕಬ್ಬಿಣ, ಮ್ಯಾಂಗನಿಸ್‌, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮೆಗ್ನಿಶಿಯಂ ಮುಂತಾದ ಪೋಷಕಾಂಶಗಳು ಹೇರಳವಾಗಿವೆ 

ಆರೋಗ್ಯ ತಜ್ಞರ ಪ್ರಕಾರ ಪ್ರತಿದಿನ ಏಲಕ್ಕೆ ತಿನ್ನುವುದು ಬಹಳ ಪ್ರಯೋಜನಕಾರಿ. 15 ದಿನಗಳ ಕಾಲ ನಿರಂತರವಾಗಿ ಏಲಕ್ಕಿ ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭವಾಗುತ್ತೆ ನೋಡಿ 

ಇದು ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರ ಒದಗಿಸುತ್ತದೆ. ಮಲಬದ್ಧತೆ, ಅಜೀರ್ಣ, ಆ್ಯಸಿಡಿಟಿ ಇತ್ಯಾದಿ ಸಮಸ್ಯೆಗಳಿಂದ ನೀವು ತೊಂದರೆ ಅನುಭವಿಸುತ್ತಿದ್ದರೆ ಏಲಕ್ಕಿ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ 

ಏಲಕ್ಕಿ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ನಿವಾರಿಸುವ ಮೂಲಕ ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ 

ಏಲಕ್ಕಿಯನ್ನು ಪ್ರತಿದಿನ ಸೇವಿಸುವುದರಿಂದ ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ. ಇದು ಮೌತ್ ಪ್ರೆಶ್ನರ್‌ನಂತೆ ಕೆಲಸ ಮಾಡುತ್ತದೆ

ಏಲಕ್ಕಿ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು 

ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಏಲಕ್ಕಿ ತಿನ್ನಬೇಕು. ಪೊಟ್ಯಾಶಿಯಂನಂತಹ ಅಗತ್ಯ ಪೋಷಕಾಂಶಗಳು ಇದರಲ್ಲಿ ಇದ್ದು, ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸುತ್ತದೆ

ಏಲಕ್ಕಿ ಕಬ್ಬಿಣಾಂಶ ಸಮೃದ್ಧವಾಗಿದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ದೇಹದಲ್ಲಿನ ರಕ್ತಹೀನತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ರಕ್ತಹೀನತೆಯಿಂದ ಎದುರಾಗುವ ಎಷ್ಟೋ ಸಮಸ್ಯೆಗಳು ಇದರಿಂದ ಪರಿಹಾರವಾಗುತ್ತವೆ 

ಏಲಕ್ಕಿ ಉತ್ಕರ್ಷಣ ನಿರೋಧಕ ಅಂಶ ಸಮೃದ್ಧವಾಗಿದ್ದು, ಇದು ಜೀವಕೋಶಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ 

ಈ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ 

ದಿನಕ್ಕೆ ಎಷ್ಟು ಬಾರಿ ಅನ್ನ ತಿಂದರೆ ಆರೋಗ್ಯಕ್ಕೆ ಒಳ್ಳೆಯದು