ಪ್ರತಿದಿನ ಬಾಳೆಹಣ್ಣು ಶೇಕ್‌ ಕುಡಿಯುವುದರಿಂದ ಆಗುವ 7 ಆರೋಗ್ಯ ಪ್ರಯೋಜನಗಳಿವು

By Raghavendra M Y
Jun 20, 2024

Hindustan Times
Kannada

ಬಾಳೆಹಣ್ಣಿನಲ್ಲಿ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳು ಹೇರಳವಾಗಿವೆ. ನಿತ್ಯ ಬಾಳೆಹಣ್ಣಿನ ಶೇಕ್ ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ

ಬಾಳೆಹಣ್ಣಿನ ಶೇಕ್ ಕುಡಿಯುವುದರಿಂದ ಏನೆಲ್ಲಾ ಪ್ರಯೋಜಗಳಿವೆ ಅನ್ನೋದನ್ನು ತಿಳಿಯೋಣ

ಆಹಾರ ತಜ್ಞರ ಪ್ರಕಾರ, ಬಾಳೆಹಣ್ಣಿನ ಶೇಕ್ ಪ್ರತಿದಿನ ಸೇವಿಸುವುದರಿಂದ ಉತ್ತಮ ಜೀರ್ಣಕ್ರಿಯೆಗೆ ಸಹಕಾರಿ. ಮಲಬದ್ಧತೆ, ಅರ್ಜೀಣ, ಅಸಿಡಿಟಿಯಂತಹ ಸಮಸ್ಯೆಗಳಿಗೆ ಪರಿಹಾರ ಇದರಲ್ಲಿದೆ

ಬಾಳೆಹಣ್ಣು ಶೇಕ್ ಸೇವಿಸುವುದರಿಂದ ಆಯಾಸ ಮತ್ತು ದೌರ್ಬಲ್ಯ ನಿವಾರಣೆಯಾಗುತ್ತದೆ. ದೇಹಕ್ಕೆ ಶಕ್ತಿ ನೀಡುತ್ತದೆ

ಪ್ರತಿದಿನ ಬಾಳೆಹಣ್ಣಿನ ಶೇಕ್ ಸೇವಿಸುವುದರಿಂದ ನಿಮ್ಮ ತ್ವಚೆ ಉತ್ತಮಗೊಳ್ಳುತ್ತೆ. ಚರ್ಮ ಹೊಳೆಯುವಂತೆ ಮಾಡುತ್ತದೆ

ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ಸೀಮಿತ ಪ್ರಮಾಣದಲ್ಲಿ ಬಾಳೆಹಣ್ಣಿನ ಶೇಕ್ ಸೇವಿಸುವುದರಿಂದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತೆ

ಬಾಳೆಹಣ್ಣಿನ ಶೇಕ್ ಉತ್ತಮ ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬನ್ನು ಹೊಂದಿರುತ್ತೆ. ಇದು ಸ್ನಾಯುಗಳಿಗೆ ಶಕ್ತಿ ನೀಡಲು ನೆರವಾಗುತ್ತೆ

ಬಾಳೆಹಣ್ಣನ್ನು ಪ್ರತಿದಿ ನ ಸೇವಿಸುವುದರಿಂದ ಒತ್ತಡದಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು

ಲೈಂಗಿಕ ಆರೋಗ್ಯ ಸುಧಾರಿಸಲು ಪ್ರತಿದಿನ ಬಾಳೆಹಣ್ಣು ತಿನ್ನುವಂತೆ ತಜ್ಞರು ಶಿಫಾರಸು ಮಾಡ್ತಾರೆ, ಬಾಳೆಹಣ್ಣಿನ ಶೇಕ್ ಕೂಡ ಸೇವಿಸಬಹುದು

ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಯಾವುದೇ ರೀತಿಯ ಆರೋಗ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ

ಗುರು ಪೂರ್ಣಿಮಾ ದಿನದಂದು ನಿಮ್ಮ ಗುರುಗಳಿಗೆ ಹೀಗೆ ಶುಭಾಶಯ ತಿಳಿಸಿ