ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು

Flickr

By Priyanka Gowda
Feb 10, 2025

Hindustan Times
Kannada

ಭಾರತದ ಬಹುತೇಕ ಅಡುಗೆಮನೆಯಲ್ಲಿ ಇವು ಕಂಡುಬರುತ್ತವೆ. ಉತ್ಕರ್ಷಣ ನಿರೋಧಕ, ಉರಿಯೂತ ನಿವಾರಕ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿರುವ ಓಂಕಾಳಿನ 7 ಆರೋಗ್ಯ ಪ್ರಯೋಜನಗಳು ಇಲ್ಲಿವೆ.

Flickr

ಹೊಟ್ಟೆ ನೋವು, ಸೆಳೆತ, ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆಗಳಿಂದ ಬಳಲುತ್ತಿದ್ದರೆ ಓಂಕಾಳಿನಿಂದ ಪ್ರಯೋಜನ ಪಡೆಯಬಹುದು. ಇದು ಜೀರ್ಣಕಾರಿ ಪ್ರಕ್ರಿಯೆಯನ್ನು ಸುಧಾರಿಸುತ್ತದೆ.  

pexels

ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲೂ ಓಂಕಾಳು ಸಹಕಾರಿ. ಓಂಕಾಳಿನಲ್ಲಿರುವ ಥೈಮೋಲ್‌ನಂತಹ ನೈಸರ್ಗಿಕ ಸಂಯುಕ್ತಗಳು ರಕ್ತಪರಿಚಲನೆಯನ್ನು ಸುಧಾರಿಸುತ್ತವೆ.   

pexels

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲೂ ಓಂಕಾಳು ಪ್ರಯೋಜನಕಾರಿಯಾಗಿದೆ.

Flickr

ಶೀತ, ಕೆಮ್ಮಿಗೆ ಓಂಕಾಳು ರಾಮಬಾಣ. ಇದು ನೈಸರ್ಗಿಕ ಮನೆಮದ್ದಾಗಿದ್ದು, ಉಸಿರಾಟದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಇದರ ಕಷಾಯ ಮಾಡಿ ಕುಡಿಯುವುದರಿಂದ ಕೆಮ್ಮು, ಶೀತ ಮತ್ತು ಮೂಗು ಕಟ್ಟುವಿಕೆಯಿಂದ ಪರಿಹಾರ ಸಿಗುತ್ತದೆ.   

Shutterstock

ಬ್ಯಾಕ್ಟೀರಿಯಾ ಮತ್ತು ಸೋಂಕುಗಳ ವಿರುದ್ಧ ಹೋರಾಡುತ್ತದೆ. ಇ.ಕೋಲಿ ಮತ್ತು ಸಾಲ್ಮೊನೆಲ್ಲಾದಂತಹ ಹಾನಿಕಾರಕ ಸೂಕ್ಷ್ಮಜೀವಿಗಳನ್ನು ಕೂಡ ಎದುರಿಸಲು ಓಂಕಾಳು ಸಹಕಾರಿ.   

ಹಲ್ಲುನೋವು ಅಥವಾ ವಸಡು ನೋವನ್ನು ಕಡಿಮೆ ಮಾಡುತ್ತದೆ. ಓಂಕಾಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಅದು ಬಾಯಿಯ ಸೋಂಕಿನ ವಿರುದ್ಧ ಹೋರಾಡುತ್ತದೆ. 

pexels

ಇದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಸಂಧಿವಾತಕ್ಕೆ ಸಂಬಂಧಿಸಿದ ನೋವನ್ನು ಕಡಿಮೆ ಮಾಡುತ್ತದೆ.  

pexels

1 ಚಮಚ ಓಂಕಾಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

pexels

RR ವಿರುದ್ಧ ಶತಕ ಸಿಡಿಸಿದ್ದ ಇಶಾನ್‌ ಕಿಶನ್‌ LSG ವಿರುದ್ಧ ಗೋಲ್ಡನ್‌ ಡಕ್‌