ಕರುಳಿನ ಅನಾರೋಗ್ಯ ಸೂಚಿಸುವ ಲಕ್ಷಣಗಳಿವು, ನಿರ್ಲಕ್ಷ್ಯ ಮಾಡದಿರಿ
By Reshma Aug 10, 2024
Hindustan Times Kannada
ನಮ್ಮ ಸಂಪೂರ್ಣ ದೇಹದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಕರುಳಿನ ಆರೋಗ್ಯ ಚೆನ್ನಾಗಿರುವುದು ಬಹಳ ಮುಖ್ಯವಾಗುತ್ತದೆ. ಸಾಮಾನ್ಯವಾಗಿ ರೋಗಗಳು ಹೊಟ್ಟೆಯಿಂದ ಆರಂಭವಾಗುತ್ತವೆ.
ಹೊಟ್ಟೆಯ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ನಮ್ಮ ಜೀರ್ಣಕ್ರಿಯೆ ವ್ಯವಸ್ಥೆ ಚೆನ್ನಾಗಿರಬೇಕು. ಹೊಟ್ಟೆಯಲ್ಲಿ ಆಹಾರವನ್ನು ಜೀರ್ಣಿಸಿಕೊಳ್ಳುವ ಕೆಲಸ ಮಾಡುತ್ತದೆ ಕರುಳು.
ನಮ್ಮ ಕರುಳು ಸರಿಯಾಗಿ ಕೆಲಸ ಮಾಡದಿದ್ದರೆ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ಕ್ರಮೇಣ ರೋಗಗಳ ಅಪಾಯವೂ ಹೆಚ್ಚುತ್ತದೆ.
ಕರುಳಿನಲ್ಲಿ ಯಾವುದೇ ರೀತಿ ತೊಂದರೆ ಎದುರಾದರೆ ದೇಹವು ನಮಗೆ ವಿವಿಧ ರೀತಿಯಲ್ಲಿ ಸೂಚನೆ ನೀಡುತ್ತದೆ. ಹಾಗಾಗಿ ಈ ಸಂಕೇತಗಳ ಬಗ್ಗೆ ನಾವು ಗಮನ ಹರಿಸಬೇಕು.
ಸಿಹಿ ತಿಂಡಿಗಳ ಹಂಬಲ ಕರುಳಿನ ತೊಂದರೆಯನ್ನು ಸೂಚಿಸುತ್ತದೆ. ಹೆಚ್ಚು ಸಕ್ಕರೆ ಅಂಶ ಇರುವ ಆಹಾರಗಳ ಸೇವನೆಯು ಕೆಟ್ಟ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗಬಹುದು.
ಆಹಾರ ಸೇವನೆಯ ನಂತರ ಪದೇ ಪದೇ ತೇಗು ಬರುವುದು ಕೂಡ ಕರುಳಿನ ಅನಾರೋಗ್ಯದ ಲಕ್ಷಣವಾಗಿದೆ. ಈ ಸಮಸ್ಯೆ ಹಲವಗಿರುತ್ತದೆ, ಇದನ್ನು ನಿರ್ಲಕ್ಷ್ಯ ಮಾಡುವುದು ತಪ್ಪು.
ತೂಕ ಕಳೆದುಕೊಳ್ಳುವುದು ಅಥವಾ ಅತಿಯಾದ ತೂಕ ಕೂಡ ಕರುಳಿನ ತೊಂದರೆಯನ್ನು ಸೂಚಿಸುತ್ತದೆ.
ಕರುಳಿನ ಸಮಸ್ಯೆಯಿಂದ ಬಳಲುವವರು ಸಾಮಾನ್ಯವಾಗಿ ಹೊಟ್ಟೆಯಲ್ಲಿ ಊತ, ಗ್ಯಾಸ್ಟ್ರಿಕ್, ನೋವು, ಮಲಬದ್ಧತೆ ಮತ್ತು ಅತಿಸಾರದಂತಹ ಹಲವು ರೋಗಲಕ್ಷಣಗಳನ್ನು ಎದುರಿಸುತ್ತಿರುತ್ತಾರೆ. ಇದು ದೊಡ್ಡ ಕರುಳಿನ ಮೇಲೆ ಪರಿಣಾಮ ಬೀರುತ್ತದೆ.
ಯಾವುದೇ ರೀತಿಯ ಕರುಳಿನ ಸಮಸ್ಯೆಯು ಮೊಡವೆ, ಎಸ್ಕಿಮಾ ಮತ್ತು ಅಲರ್ಜಿಯಂತಹ ಚರ್ಮದ ಕಿರಿಕಿರಿಯನ್ನು ಉಂಟು ಮಾಡುತ್ತದೆ.
ಸರಿಯಾಗಿ ತಿನ್ನುತ್ತಿದ್ದು ದಿನವಿಡೀ ದಣಿದಿದ್ದರೆ ಅದು ಕರುಳಿನ ಅನಾರೋಗ್ಯದ ಲಕ್ಷಣವಾಗಿದೆ.
ಹೊಟ್ಟೆ ಭಾರ ಮತ್ತು ದುರ್ಗಂಧ ಸಮಸ್ಯೆ ಕೂಡ ಕರುಳಿನ ಹಾನಿಯ ಲಕ್ಷಣವಾಗಿದೆ. ಇದನ್ನೂ ಕೂಡ ನಿರ್ಲಕ್ಷ್ಯ ಮಾಡಬೇಡಿ.
ಈ ಸುದ್ದಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸುವುದು ಉತ್ತಮ.