ಅಡುಗೆಗೆ ಬಳಸಲೇಬಾರದಂತಹ 7 ಎಣ್ಣೆಗಳಿವು, ಬಳಸಿದ್ರೆ ಆರೋಗ್ಯಕ್ಕೆ ತೊಂದರೆ ಖಚಿತ

By Reshma
Jul 15, 2024

Hindustan Times
Kannada

ಅಡುಗೆ ವಿಷಯಕ್ಕೆ ಬಂದಾಗ ಅಡುಗೆಎಣ್ಣೆ ಖಾದ್ಯಗಳ ರುಚಿ ಹೆಚ್ಚಿಸುವ ಜೊತೆಗೆ ಪೌಷ್ಟಿಕಾಂಶವನ್ನೂ ಒದಗಿಸುತ್ತವೆ. ಆದರೆ ನಾವು ಬಳಸುವ ಎಲ್ಲಾ ಅಡುಗೆ ಎಣ್ಣೆಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾದರೆ ಅಡುಗೆಗೆ ಬಳಸಬಾರದಂತಹ ಎಣ್ಣೆಗಳು ಯಾವುವು ನೋಡಿ. 

ಅಡುಗೆಎಣ್ಣೆಯ ಮಹತ್ವ: ಅಡುಗೆಎಣ್ಣೆಯು ಕೊಬ್ಬಿನಲ್ಲಿ ಕರಗುವ ಪೋಷಕಾಂಶಗಳಾದ ವಿಟಮಿನ್‌ ಎ, ಡಿ ಮತ್ತು ಕೆ, ಇ ಹೀರಿಕೊಳ್ಳುವಿಕೆಯನ್ನು ಸುಲಭಗೊಳಿಸುತ್ತದೆ. ಎಣ್ಣೆಯನ್ನು ಅಡುಗೆಗೆ ಬಳಸಿದಾಗ ಈ ಪೋಷಕಾಂಶಗಳನ್ನು ಆಹಾರದಿಂದ ಜೀರ್ಣಾಂಗ ವ್ಯವಸ್ಥೆಗೆ ಸಾಗಿಸಲು ಸಹಾಯ ಮಾಡುತ್ತವೆ. ಇದರಿಂದ ದೇಹಕ್ಕೆ ಸಮರ್ಪಕವಾಗಿ ಪೋಷಕಾಂಶ ಸಿಗುವಂತಾಗುತ್ತದೆ. 

ಜೋಳದ ಎಣ್ಣೆ: ಇದು ಅಪರ್ಯಾಪ್ತ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಇದು ಕ್ಯಾನ್ಸರ್‌, ಉರಿಯೂತ, ಅಸ್ತಮಾ, ಟೈಪ್‌-2 ಡಯಾಬಿಟಿಸ್‌ ಸೇರಿದಂತೆ ಹಲವು ರೋಗಗಳಿಗೆ ಮೂಲವಾಗಬಹುದು. 

ಸೋಯಾಬಿನ್‌ ಎಣ್ಣೆ: ಇದರಲ್ಲಿ ಒಮೆಗಾ 6 ಕೊಬ್ಬಿನಾಮ್ಲ ಹೇರಳವಾಗಿದೆ. ಇದರ ಅತಿಯಾದ ಸೇವನೆಯು ಉರಿಯೂತದ ಸಮಸ್ಯೆಯನ್ನು ಹೆಚ್ಚಿಸುತ್ತದೆ ಹಾಗೂ ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. 

ಹತ್ತಿ ಬೀಜದ ಎಣ್ಣೆ: ಇದರಲ್ಲೂ ಕೂಡ ಒಮೆಗಾ 3 ಕೊಬ್ಬಿನಾಮ್ಲ ಹೇರಳವಾಗಿರುತ್ತದೆ. ಇದು ಕೂಡ ಉರಿಯೂತ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. 

ಮಿಶ್ರಿತ ಸಸ್ಯಜನ್ಯ ಎಣ್ಣೆ: ಇದರಲ್ಲೂ ಕೂಡ ಒಮೆಗಾ 6 ಪ್ಯಾಟಿ ಆಸಿಡ್‌ ಅಂಶ ಸಮೃದ್ಧವಾಗಿರುತ್ತದೆ. ಇದು ಕೂಡ ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. 

ಹೈಡ್ರೋಜೆನೇಟೆಡ್‌ ಎಣ್ಣೆ: ಈ ತೈಲಗಳನ್ನು ಹೈಡ್ರೋಜೆನೀಕರಣ ಪ್ರಕ್ರಿಯೆ ಮೂಲಕ ತಯಾರಿಸಲಾಗುತ್ತದೆ. ಈ ದ್ರವ ತೈಲವು ಘನ ಕೊಬ್ಬುಗಳಾಗಿ ಪರಿವರ್ತಿತವಾಗಬಹುದು. ಈ ಕೊಬ್ಬುಗಳು ಎಲ್‌ಡಿಎಲ್‌ ಅಂದರೆ ಕೆಟ್ಟ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತದೆ. ಇದು ಹೃದಯದ ಸಮಸ್ಯೆಯನ್ನು ವೃದ್ಧಿಸುತ್ತದೆ. 

ರೈಸ್‌ ಬ್ರಾನ್‌ ಎಣ್ಣೆ: ವಿಟಮಿನ್‌ ಇ ಸಮೃದ್ಧವಾಗಿರುವ ಅಕ್ಕಿ ಹೊಟ್ಟಿನ ಎಣ್ಣೆ ಒಮೆಗಾ 6 ಕೊಬ್ಬಿನಾಮ್ಲವನ್ನು ಹೇರಳವಾಗಿ ಹೊಂದಿದೆ. ಇದು ಒಮೆಗಾ 3 ಹಾಗೂ ಒಮೆಗಾ 6 ಸಮತೋಲನಕ್ಕೆ ಅಡ್ಡಿಪಡಿಸಬಹುದು. ಅಲ್ಲದೇ ಇದು ಇತರ ಆರೋಗ್ಯ ಸಮಸ್ಯೆಗಳಿಗೂ ಮೂಲವಾಗಬಹುದು.

ಪಾಮ್‌ ಆಯಿಲ್‌: ಇದು ಹೆಚ್ಚು ಸ್ಯಾಚುರೇಟೆಡ್‌ ಕೊಬ್ಬಿನಾಮ್ಲವನ್ನು ಹೊಂದಿರುತ್ತದೆ. ಇದರಿಂದ ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್‌ ಮಟ್ಟ ಏರಿಕೆಯಾಗಬಹುದು. ಇದನ್ನು ಅತಿಯಾಗಿ ಸೇವಿಸಿದಾಗ ಹೃದ್ರೋಗದ ಅಪಾಯ ಹೆಚ್ಚಬಹುದು. 

ಹೆಚ್ಚು ಆದಾಯ ಗಳಿಸಲು ಕೌಶಲ್ಯ ಕಲಿಸುವ 6 ಉಚಿತ ಆನ್‌ಲೈನ್ ಕೋರ್ಸ್‌ಗಳು

Photo credit: Unsplash