ನೈಸರ್ಗಿಕವಾಗಿ ಅತ್ಯಧಿಕ ವಿಟಮಿನ್ ಸಿ ಹೊಂದಿರುವ 8 ಹಣ್ಣುಗಳು 

PEXELS, HEALTHLINE

By Reshma
May 12, 2025

Hindustan Times
Kannada

ವಿಟಮಿನ್ ಸಿ ಕೇವಲ ರೋಗನಿರೋಧಕ ಶಕ್ತಿಗಾಗಿ ಮಾತ್ರವಲ್ಲ, ಇದು ಚರ್ಮದ ಹೊಳಪನ್ನೂ ಹೆಚ್ಚಿಸುತ್ತದೆ. ಆಕ್ಸಿಡೇಟಿವ್‌ ಒತ್ತಡದ ವಿರುದ್ಧ ಹೋರಾಡುತ್ತದೆ. ಇದು ನಮ್ಮ ದೇಹಕ್ಕೆ ಅತಿ ಅಗತ್ಯ

PEXELS

ನೈಸರ್ಗಿಕವಾಗಿ ಅತ್ಯಧಿಕ ವಿಟಮಿನ್‌ ಸಿ ಹೊಂದಿರುವ 8 ಹಣ್ಣುಗಳು ಯಾವುವು ನೋಡಿ

PEXELS

ಕಾಕಾಡು ಪ್ಲಮ್

ಈ ಅಪರೂಪದ ಹಣ್ಣಿನಲ್ಲಿ ಕಿತ್ತಳೆಗಿಂತ 100 ಪಟ್ಟು ಹೆಚ್ಚು ವಿಟಮಿನ್ ಸಿ ಇದೆ. ಕೇವಲ 100 ಗ್ರಾಂ ಹಣ್ಣಿನಲ್ಲಿ 3,000 ಮಿಗ್ರಾಂ ವಿಟಮಿನ್ ಸಿ ಇರುತ್ತದೆ

PINTEREST

ಅಸೆರೋಲಾ ಚೆರ್ರಿ

ಗಾತ್ರದಲ್ಲಿ ಸಣ್ಣದಾದರೂ ಈ ಚೆರ್ರಿಗಳು 100 ಗ್ರಾಂಗೆ 1,600 ಮಿಗ್ರಾಂವರೆಗೆ ವಿಟಮಿನ್‌ ಸಿ ಹೊಂದಿರುತ್ತವೆ. ಚರ್ಮ ಮತ್ತು ಪ್ರತಿರಕ್ಷಣಾ ಬೆಂಬಲಕ್ಕೆ ಇದು ಉತ್ತಮವಾಗಿದೆ 

PEXELS

ರೋಸ್ ಹಿಪ್ಸ್

ಈ ಕೆಂಪು ಹಣ್ಣುಗಳು 100 ಗ್ರಾಂಗೆ ಸುಮಾರು 500 ಮಿಗ್ರಾಂ ವಿಟಮಿನ್ ಸಿ ಅನ್ನು ನೀಡುತ್ತವೆ.  ಇದನ್ನು ಚಹಾದ ಜೊತೆ ಕುದಿಸಿ ಕುಡಿಯಬಹುದು

PEXELS

ಪೇರಳೆ

ಒಂದು ಮಧ್ಯಮ ಗಾತ್ರದ ಪೇರಳೆ ಹಣ್ಣಿನಲ್ಲಿ 200 ಮಿಗ್ರಾಂ ಹೆಚ್ಚು ವಿಟಮಿನ್‌ ಸಿ ಇರುತ್ತದೆ. ಇದು ದೈನಂದಿನ ಅಗತ್ಯಕ್ಕಿಂತ ಎರಡು ಪಟ್ಟು ಹೆಚ್ಚು. ಜೊತೆಗೆ, ಇದು ಕರುಳಿನ ಆರೋಗ್ಯಕ್ಕೂ ಉತ್ತಮವಾಗಿದೆ 

PEXELS

ಬ್ಲ್ಯಾಕ್ ಕರ್ರಂಟ್ ಗಳು

ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವ ಈ ಹಣ್ಣಿನಲ್ಲಿ 100 ಗ್ರಾಂಗೆ ಸುಮಾರು 180 ಮಿಗ್ರಾಂ ವಿಟಮಿನ್ ಸಿ ಇರುತ್ತದೆ 

PEXELS

ಕಿವಿ

ಈ ಹಣ್ಣಿನಲ್ಲಿ ಪ್ರತಿ 100 ಗ್ರಾಂಗೆ ಸುಮಾರು 92 ಮಿಗ್ರಾಂ ವಿಟಮಿನ್ ಸಿ ಇರುತ್ತದೆ. ಜೀರ್ಣಕ್ರಿಯೆ ಮತ್ತು ಚರ್ಮದ ಆರ್ದ್ರತೆಗೆ ಉತ್ತಮವಾಗಿದೆ 

PEXELS

ಸ್ಟ್ರಾಬೆರಿ

ಒಂದು ಕಪ್ ಸ್ಟ್ರಾಬೆರಿಯಲ್ಲಿ ಸುಮಾರು 85 ಮಿಗ್ರಾಂ ವಿಟಮಿನ್‌ ಸಿ ಅಂಶವಿರುತ್ತದೆ. ಇದು ಹೃದಯ ಆರೋಗ್ಯಕ್ಕೆ ಉತ್ತಮ. ಈ ಹಣ್ಣು ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ

PEXELS

ಕಿತ್ತಳೆ

100 ಗ್ರಾಂಗೆ 53 ಮಿಗ್ರಾಂ ವಿಟಮಿಸ್‌ ಸಿ ಹೊಂದಿರುವ ಹಣ್ಣಿದು, ಇದು ದೇಹವನ್ನು ಬಹಳ ಬೇಗ ಹೈಡ್ರೇಟ್‌ ಮಾಡುತ್ತದೆ

PEXELS

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS