ಡೆಂಗ್ಯೂ ಜ್ವರ ಬಂದಾಗ ಪ್ಲೇಟ್ಲೆಟ್ ಹೆಚ್ಚಿಸುವ 9 ಜ್ಯೂಸ್‌ಗಳಿವು
Pexel
By Raghavendra M Y Oct 07, 2024
Hindustan Times Kannada
ಡೆಂಗ್ಯೂ ಜ್ವರದಿಂದ ಚೇತರಿಸಿಕೊಳ್ಳು ಸರಿಯಾದ ಆಹಾರ ಪದ್ಧತಿ ಬಹಳ ಮುಖ್ಯವಾಗುತ್ತದೆ
Pexel
ಕೆಲವು ರೀತಿಯ ಹಣ್ಣು ಮತ್ತು ತರಕಾರಿ ಜ್ಯೂಸ್‌ಗಳು ನೈಸರ್ಗಿಕವಾಗಿ ಪ್ಲೇಟ್ಲೆಟ್‌ಗಳನ್ನು ಹೆಚ್ಚಿಸುತ್ತವೆ
Pexel
ಕೆಲವೊಂದು ಜ್ಯೂಸ್‌ಗಳು ರೋಗನಿರೋಧ ಶಕ್ತಿಯನ್ನು ಹೆಚ್ಚಿಸಿ ಡೆಂಗ್ಯೂನಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತವೆ
Pexel
ಕುಂಬಳಕಾಯಿಯಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದು ಪ್ಲೇಟ್ಲೆಟ್‌ಗಳ ಹೆಚ್ಚಿಸಲು ನೆರವಾಗುತ್ತೆ. ಡೆಂಗ್ಯೂನಿಂದ ಚೇತರಿಕೆಯ ಸಮಯದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನ ಬಲಪಡಿಸುತ್ತೆ
ಪಾಲಕ್, ಎಲೆಕೋಸು ಸೇರಿ ಇತರೆ ಹಸಿರು ಸೊಪ್ಪುಗಳಲ್ಲಿ ಮಿಟಮಿನ್ ಕೆ ಸಮೃದ್ಧವಾಗಿರುತ್ತದೆ. ಇದು ಪ್ಲೇಟ್ಲೆಟ್ ಉತ್ಪಾದನೆಯನ್ನು ಉತ್ತೇಜಿಸುತ್ತೆ
ಬೀಟ್‌ರೂಟ್, ಶುಂಠಿ, ಪುದೀನ ಮಿಶ್ರಿತ ಜ್ಯೂಸ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ. ಬೀಟ್‌ರೂಟ್‌ನಲ್ಲಿ ಕಬ್ಬಿಣ, ಫೋಲೇಟ್, ಆಂಟಿಆಕ್ಸಿಡೆಂಟ್ ಅಧಿಕವಿದೆ. ಶುಂಠಿ ಮತ್ತು ಪುದೀನಾ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತೆ
ದಾಳಿಂಬೆ ಜ್ಯೂಸ್ ಕೂಡ ಪ್ಲೇಟ್ಲೆಟ್ ಹೆಚ್ಚಿಸಲು ನೆರವಾಗುತ್ತೆ. ದಾಳಿಂಬೆಯಲ್ಲಿ ಕಬ್ಬಿಣ, ಆಂಟಿಆಕ್ಸಿಡೆಂಟ್‌ಗಳು, ಪಾಲಿಫಿನಾಲ್‌ಗಳು ಹೆಚ್ಚಿವೆ. ಇವು ಪ್ಲೇಟ್ಲೆಟ್ ಸುಧಾರಣೆ ಪರಿಣಾಮಕಾರಿಯಾಗಿವೆ
ವೀಳ್ಯದೆಲೆ ಜ್ಯೂಸ್ - ವೀಳ್ಯದೆಲೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ಲೇಟ್ಲೆಟ್ ಉತ್ಪಾದನೆಯನ್ನು ಬೆಂಬಲಿಸುತ್ತೆ. ವೀಳ್ಯದೆಲೆ ಜ್ಯೂಸ್‌ಗೆ ಶುಂಠಿಯನ್ನು ಸೇರಿಸುವುದು ಹೆಚ್ಚುವರಿ ಉತ್ಕರ್ಷಣ ನಿರೋಧಕ ಪ್ರಯೋಜ ನೀಡುತ್ತೆ
ಅಲೋವೆರಾ ಜ್ಯೂಸ್ - ಅಲೋವೆರಾ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುವ ಜೊತೆಗೆ ಡೆಂಗ್ಯೂ ಸಮಯದಲ್ಲಿ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸುತ್ತೆ
ಪಪ್ಪಾಯಿ ಎಲೆ ಜ್ಯೂಸ್ - ಪಪ್ಪಾಯಿ ಎಲೆಯ ಜ್ಯೂಸ್ ಪ್ಲೇಟ್ಲೆಟ್ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಆಲಸ್ಯ, ದೌರ್ಬಲ್ಯದಂತಹ ಡೆಂಗ್ಯೂ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತೆ
ಕಿತ್ತಳೆ ಜ್ಯೂಸ್ - ಮಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆ ಜ್ಯೂಸ್ ಪ್ಲೇಟ್ಲೆಟ್ ಕಾರ್ಯವನ್ನು ಸುಧಾರಿಸುತ್ತೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಡೆಂಗ್ಯೂ ಜ್ವರದಿಂದ ಶೀಘ್ರ ಚೇತರಿಕೆಗೆ ಸಹಾಯ ಮಾಡುತ್ತೆ
ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು