ಬೇಸಿಗೆಯಲ್ಲಿ ಲೋಳೆಸರದ ತಿರುಳಿನ ಬಳಕೆಯಿಂದ ದೇಹಕ್ಕಿದೆ ಇಷ್ಟೆಲ್ಲಾ ಪ್ರಯೋಜನ
pixa bay
By Reshma Apr 08, 2024
Hindustan Times Kannada
ಅಲೋವೆರಾ ಅಥವಾ ಲೋಳೆಸರ ಸರ್ವಕಾಲದಲ್ಲೂ ಬೆಳೆಯುವ ಸಸ್ಯ. ಲೋಳೆಸರದ ತಿರುಳು ಅಂದ ಹೆಚ್ಚಿಸುವುದು ಮಾತ್ರವಲ್ಲ, ಬೇಸಿಗೆಯಲ್ಲಿ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ಸದಾ ಯೌವನಿಗರಂತೆ ಇರಬಹುದು. ಇದನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
pixa bay
ಅಲೋವೆರಾದ ತಿರುಳು ದೇಹದ ಉಷ್ಣತೆಯನ್ನು ನಿವಾರಿಸುತ್ತದೆ ಮತ್ತು ದೇಹಕ್ಕೆ ಚೈತನ್ಯ ನೀಡುತ್ತದೆ.
pixa bay
ಮಹಿಳೆಯರಿಗೆ ಮೂತ್ರ ವಿಸರ್ಜನೆಯ ವೇಳೆ ಉರಿಯಾಗುವುದು, ಬಿಳಿಮುಟ್ಟು,ಋತುಚಕ್ರದ ತೊಂದರೆಗಳು, ಬಂಜೆತನ ಇತ್ಯಾದಿ ರೋಗಗಳು ನಿವಾರಿಸುವ ಗುಣ ಇದಕ್ಕಿದೆ.
pixa bay
ಅಲೋವೆರಾದ ತಿರುಳು, ಬೆಣ್ಣೆ, ಅರಿಶಿನ ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ ಸೇವಿಸಿದರೆ ಮೂತ್ರದ ಬಣ್ಣ ಹಳದಿಯಾಗುವುದು, ಉರಿಮೂತ್ರದಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡಿ, ಬೇಸಿಗೆಯಲ್ಲಿ ಕಾಡುವ ಮೈಕೈ ನೋವು ಸಮಸ್ಯೆಯನ್ನೂ ನಿವಾರಿಸುತ್ತದೆ.
pixa bay
ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಅಲೋವೆರಾವನ್ನು ಸೌಂದರ್ಯವರ್ಧಕಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅಲೋವೆರಾದಲ್ಲಿನ ಆಂಟಿಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಅಂಶಗಳು ದೇಹವನ್ನು ಸೋಂಕಿನಿಂದ ರಕ್ಷಿಸುತ್ತವೆ.
pixa bay
ಅಲೋವೆರಾದಲ್ಲಿನ ಔಷಧೀಯ ಗುಣಗಳು ಗಾಯಗಳನ್ನು ಗುಣಪಡಿಸುತ್ತವೆ. ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಕಲೆಗಳು ಮಾಯವಾಗುವಂತೆ ಮಾಡುತ್ತದೆ. ಅಲೋವೆರಾವನ್ನು ಸೇವಿಸುವ ಬದಲು ಚರ್ಮಕ್ಕೆ ಉಜ್ಜಿಕೊಳ್ಳಿ.
pixa bay
ಅಲೋವೆರಾದ ತಿರುಳು ಹಲ್ಲುಗಳ ಆರೋಗ್ಯವನ್ನು ಕಾಪಾಡುತ್ತದೆ. ಮಲಬದ್ಧತೆಯನ್ನು ಗುಣಪಡಿಸುತ್ತದೆ. ವಯಸ್ಸಾದಂತೆ ಉಂಟಾಗುವ ಚರ್ಮದ ಸುಕ್ಕುಗಳು ಸೇರಿದಂತೆ ಹಲವು ಸಮಸ್ಯೆಗಳನ್ನು ಸರಿಪಡಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
pixa bay
ಆಲೋವೆರಾ ತಿರುಳು ಚರ್ಮದ ಊರಿಯೂತ ನಿವಾರಣೆಗೂ ಸಹಾಯ ಮಾಡುತ್ತದೆ. ತ್ವದೆಯ ತೇವಾಂಶ ಹೆಚ್ಚಲು ಆಲೊವೆರಾದ ತಿರುಳು ಸಹಕಾರಿ.