ಬೇಸಿಗೆಯಲ್ಲಿ ಪ್ರತಿದಿನ ನೆಲ್ಲಿಕಾಯಿ ಜ್ಯೂಸ್‌ ಕುಡಿಯುವುದರಿಂದಾಗುವ 7 ಪ್ರಯೋಜನಗಳಿವು 

By Reshma
Apr 09, 2024

Hindustan Times
Kannada

ನೆಲ್ಲಿಕಾಯಿ ಜ್ಯೂಸ್‌ನಲ್ಲಿ ವಿಟಮಿನ್‌ ಸಮೃದ್ಧವಾಗಿದೆ. ಕಬ್ಬಿಣಾಂಶ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಹಾಗೂ ಪ್ರೊಟೀನ್‌ ಅಂಶಗಳು ಇದರಲ್ಲಿ ಸಮೃದ್ಧವಾಗಿದೆ. 

ಬೇಸಿಗೆಯಲ್ಲಿ ನೆಲ್ಲಿಕಾಯಿ ಜ್ಯೂಸ್‌ ಅನ್ನು ಪ್ರತಿನಿತ್ಯ ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. 

ಇದು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

ವಿಟಮಿನ್‌ ಸಿಯಿಂದ ಸಮೃದ್ಧವಾಗಿರುವ ನೆಲ್ಲಿಕಾಯಿ ಜ್ಯೂಸ್‌ ಕುಡಿಯುವುದರಿಂದ ರೋಗಗಳಿಂದ ದೂರವಿರಬಹುದು. 

ಇದು ದೇಹಕ್ಕೆ ಶಕ್ತಿ ನೀಡಿ, ಚೈತನ್ಯ ಮರಳುವಂತೆ ಮಾಡುತ್ತದೆ. 

ಇದರಲ್ಲಿ ಉತ್ಕರ್ಷಣ ವಿರೋಧಿ ಅಂಶಗಳು ಸಮೃದ್ಧವಾಗಿದ್ದು, ಚರ್ಮದ ಹೊಳಪು ಹೆಚ್ಚಲು ಸಹಾಯ ಮಾಡುತ್ತದೆ. 

ಪ್ರತಿದಿನ  ನೆಲ್ಲಿಕಾಯಿ ರಸ ಸೇವನೆಯಿಂದ ಜೀರ್ಣಕ್ರಿಯೆ ವೃದ್ಧಿಯಾಗುವುದು ಮಾತ್ರವಲ್ಲ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. 

ಬೇಸಿಗೆಯಲ್ಲಿ ಉಂಟಾಗುವ ನಿರ್ಜಲೀಕರಣ ಸಮಸ್ಯೆ ತಡೆಗಟ್ಟಲು ಕೂಡ ನೆಲ್ಲಿಕಾಯಿ ಉತ್ತಮ. 

ಕೂದಲಿನ ಸಮಸ್ಯೆಗಳು ನಿವಾರಣೆಯಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ. 

ಈ ಸುದ್ದಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಈ ಕುರಿತು ನಿಖರ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ. 

ಪ್ಲೇಆಫ್​ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ