ಅತಿಯಾದ ಸಿಟ್ಟಿನಿಂದ ಬರುವ ಆರೋಗ್ಯ ಸಮಸ್ಯೆಗಳಿವು, ಕೋಪ ನಿಯಂತ್ರಿಸಿ

By Reshma
Sep 17, 2024

Hindustan Times
Kannada

ಕೋಪವು ಮನುಷ್ಯನ ಸಾಮಾನ್ಯ ಭಾವನೆಯಾಗಿದೆ. ಸಾಮಾನ್ಯವಾಗಿ ನಮಗೆಲ್ಲರಿಗೂ ಕೋಪ ಬರುತ್ತೆ. ಆದರೆ ಕೆಲವರು ಅನಾವಶ್ಯಕವಾಗಿ ಕೋಪ ಮಾಡಿಕೊಳ್ಳುತ್ತಾರೆ

ನೀವು ಪ್ರತಿ ವಿಚಾರಕ್ಕೂ ಕೋಪ ಮಾಡಿಕೊಳ್ಳುವ ಅಭ್ಯಾಸ ಹೊಂದಿದ್ರೆ ಈ ಅಭ್ಯಾಸವನ್ನು ಬದಲಿಸಿಕೊಳ್ಳುವುದು ಉತ್ತಮ. ಯಾಕೆಂದರೆ ಅತಿಯಾದ ಕೋಪದಿಂದ ಹೃದ್ರೋಗ, ಪಾರ್ಶ್ವವಾಯುವಿನಿಂತಹ ಸಮಸ್ಯೆಗಳು ಕಾಡಬಹುದು 

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ ಶಾರ್ಟ್ ಟೆಂಪರ್ ಆಗಿದ್ದರೆ ಹೃದ್ರೋಗ ಹಾಗೂ ಪಾರ್ಶ್ಚವಾಯುವಿನ ಅಪಾಯ ಹೆಚ್ಚು 

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ 200ಕ್ಕೂ ಹೆಚ್ಚು ಯುವಕರ ಮೇಲೆ ಅಧ್ಯಯನ ಮಾಡಿತ್ತು

ಈ ಅಧ್ಯಯನದ ಪ್ರಕಾರ ಕೋಪ ಇರವವರ ನರಗಳು ಕಿರಿದಾಗುತ್ತಿವೆ ಎಂಬುದನ್ನು ಗಮನಿಸಿದೆ

ರಕ್ತನಾಳಗಳ ಕಿರುದಾಗುವಿಕೆಯು  ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಪಾರ್ಶ್ವವಾಯು ಮುಂತಾದ ಸಮಸ್ಯೆಗಳನ್ನು ತಂದೊಡ್ಡಬಹುದು

ಪ್ರತಿಯೊಂದು ವಿಚಾರಕ್ಕೂ ಕೋಪ ಬಂದರೆ ಈ ಅಭ್ಯಾಸವನ್ನು ಬದಲಿಸಿಕೊಳ್ಳುವುದು ಉತ್ತಮ. ಕೋಪವನ್ನು ಕಡಿಮೆ ಮಾಡಲು ಈ ಕ್ರಮಗಳು ಸಹಾಯವಾಗಬಹುದು

ಕೋಪ ನಿಯಂತ್ರಿಸಲು ನೀವು ನಿಯಮಿತವಾಗಿ ಧ್ಯಾನ ಮಾಡಬಹುದು. ಯೋಗ ಹಾಗೂ ಜಾಗಿಂಗ್‌ನಂತಹ ಅಭ್ಯಾಸಗಳನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಿ 

ಬೆಳಗಿನ ಹೊತ್ತು ದೈಹಿಕ  ಚಟುವಟಿಕೆ ಮತ್ತು ಧ್ಯಾನ ಮಾಡುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಇದರಿಂದ ಕೋಪ ನಿಯಂತ್ರಣಕ್ಕೆ ಬರುತ್ತದೆ

ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ನಿಖರ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ 

ಯುನಿವರ್ಸಿಟಿ ರ‍್ಯಾಂಕಿಂಗ್: UKಯ ಟಾಪ್ 7 ವಿಶ್ವವಿದ್ಯಾನಿಲಯಗಳು

pixabay