ಸೇಬು ತಿನ್ನುವ ಮೊದಲು ಈ ವಿಷ್ಯ ತಿಳ್ಕೊಳ್ಳಿ: ಸಿಪ್ಪೆ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದೇ?

By Reshma
Jul 15, 2024

Hindustan Times
Kannada

ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರಿಂದ ದೂರ ಇರಬಹುದು ಎಂಬ ಮಾತನ್ನು ಮಾತು ಬಾಲ್ಯದಿಂದಲೂ ಕೇಳಿಕೊಂಡು ಬಂದಿದ್ದೇವೆ. 

ಸೇಬಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತು. ಹಲವರಿಗೆ ಸೇಬು ಫೇವರಿಟ್‌ ಕೂಡ. ಇದನ್ನು ವಿವಿಧ ರೂಪದಲ್ಲಿ ತಿನ್ನಲಾಗುತ್ತದೆ.

ಸೇಬುಹಣ್ಣನ್ನ ಕೆಲವರು ಸಿಪ್ಪೆ ತೆಗೆದು ತಿಂದ್ರೆ, ಕೆಲವರು ಸಿಪ್ಪೆ ತೆಗೆಯದೇ ತಿನ್ನುತ್ತಾರೆ. ಹಾಗಾದ್ರೆ ಸೇಬು ತಿನ್ನುವಾಗ ಸಿಪ್ಪೆ ತೆಗೆಯಬೇಕೇ ಅಥವಾ ತೆಗೆಯಬಾರದೇ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು. 

ಸೇಬುಸಿಪ್ಪೆ ತೆಗೆದು ತಿನ್ನಬೇಕೇ ಅಥವಾ ಹಾಗೇ ತಿನ್ನಬಹುದೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. 

ಈ ವಿಷಯವಾಗಿ ಡಾ. ವರಲಕ್ಞ್ಮೀ ಯನಮಂದ್ರ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ. 

ಡಾ. ವರಲಕ್ಷ್ಮೀ ಅವರ ಪ್ರಕಾರ ಸೇಬುಹಣ್ಣಿನ ಸಿಪ್ಪೆಯಲ್ಲಿ ಕರಗದ ನಾರಿನಾಂಶವಿರುತ್ತದೆ. ದೇಹಕ್ಕೆ ಇದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. 

ಅದಾಗ್ಯೂ ಸೇಬಿನ ಸಿಪ್ಪೆಯು ಮಲಬದ್ಧತೆ ಸಮಸ್ಯೆ ಇರುವ ರೋಗಿಗಳಿಗೆ ಪ್ರಯೋಜನಕಾರಿ.

ಸೇಬು ಗುದದ್ವಾರದಲ್ಲಿರುವ ಪೆಕ್ಟಿನ್‌ ಎಂಬ ಕರಗುವ ನಾರಿನಾಂಶವನ್ನು ಹೊಂದಿರುತ್ತದೆ. ಇದು ನೀರಿನಲ್ಲಿ ಸುಲಭವಾಗಿ ಕರಗುತ್ತದೆ. ಪೆಕ್ಟಿನ್‌ ಸಕ್ಕರೆ ಮತ್ತು ಕೊಲೆಸ್ಟ್ರಾಲ್‌ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

ನೀವು ಸೇಬನ್ನು ಸಿಪ್ಪೆಯೊಂದಿಗೆ ಮತ್ತು ಸಿಪ್ಪೆ ಸುಲಿದ ನಂತರವೂ ತಿನ್ನಬಹುದು. ಆದರೆ ನಿಮ್ಮ ದೇಹಕ್ಕೆ  ಅದರ ಪ್ರಯೋಜನವನ್ನು ಅರಿತು ತಿನ್ನುವುದು ಮುಖ್ಯ. 

ಯಾವಾಗಲೂ ಸೇಬುಹಣ್ಣನ್ನು ಸರಿಯಾದ ರೀತಿಯಲ್ಲಿ ಮತ್ತು ನಿಗದಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ. ಯಾವುದೂ ಕೂಡ ಅತಿಯಾದ್ರೆ ವಿಷ ನೆನಪಿರಲಿ.

ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ