ಹೃದ್ರೋಗ ನಿವಾರಣೆಯಿಂದ ಕರುಳಿನ ಆರೋಗ್ಯದವರೆಗೆ, ಬೆಣ್ಣೆಹಣ್ಣಿನ ಪ್ರಯೋಜನಗಳಿವು
Pexels
By Reshma May 05, 2024
Hindustan Times Kannada
ರುಚಿಯಿಲ್ಲದೇ ಇದ್ದರೂ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಅವಕಾಡೊ ಅಥವಾ ಬೆಣ್ಣೆಹಣ್ಣು ಸೇವನೆಯಿಂದ ಹಲವು ಉಪಯೋಗಗಳಿವೆ.
ಕೂದಲಿನ ಆರೋಗ್ಯದಿಂದ ಜೀರ್ಣಕ್ರಿಯೆ ಹೆಚ್ಚುವವರೆಗೆ ಬೆಣ್ಣೆಹಣ್ಣು ಅಥವಾ ಅವಕಾಡೊದಿಂದ ಅಂದ, ಆರೋಗ್ಯ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
Pexels
ಆವಕಾಡೊಗಳು ಪೊಟ್ಯಾಸಿಯಮ್, ವಿಟಮಿನ್-ಕೆ, ವಿಟಮಿನ್-ಇ ಮತ್ತು ಆರೋಗ್ಯಕರ ಮೊನೊಸ್ಯಾಚುರೇಟೆಡ್ ಕೊಬ್ಬುಗಳಲ್ಲಿ ಸಮೃದ್ಧವಾಗಿವೆ. ಇವು ನಮ್ಮ ಒಟ್ಟಾರೆ ಆರೋಗ್ಯ ಮತ್ತು ಚೈತನ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.
Pexels
ಮೊನೊಸ್ಯಾಚುರೇಟೆಡ್ ಕೊಬ್ಬುಗಳಲ್ಲಿ ಸಮೃದ್ಧವಾಗಿರುವ ಆವಕಾಡೊ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.
Pexels
ಇದು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ನಿಮ್ಮ ಹೃದಯವನ್ನು ಆರೋಗ್ಯಕರ ಮತ್ತು ಸುಂದರವಾಗಿರಿಸುತ್ತದೆ.
pixa bay
ಆವಕಾಡೊ ಹಣ್ಣು ಚರ್ಮ ಮತ್ತು ಕೂದಲಿನ ಆರೈಕೆಗೆ ತುಂಬಾ ಪ್ರಯೋಜನಕಾರಿ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿದೆ, ಇದು ನಿಮ್ಮ ಚರ್ಮವನ್ನು ಪೋಷಿಸುತ್ತದೆ. ಅಲ್ಲದೆ ಕೂದಲನ್ನು ಹೊಳೆಯುವಂತೆ ಮಾಡಿ, ಬುಡದಿಂದಲೇ ಸ್ಟ್ರಾಂಗ್ ಆಗಿಸುತ್ತದೆ.
Pexels
ನಾರಿನಾಂಶದಿಂದ ಸಮೃದ್ಧವಾಗಿರುವ ಆವಕಾಡೊಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನಿಮ್ಮ ಹೊಟ್ಟೆಯನ್ನು ಉತ್ತಮ ಸ್ಥಿತಿಯಲ್ಲಿಡಲು ಮತ್ತು ಕರುಳಿನ ಆರೋಗ್ಯಕ್ಕೂ ಇದು ಉತ್ತಮ.
Pexels
ಆವಕಾಡೊದಲ್ಲಿರುವ ಆರೋಗ್ಯಕರ ಕೊಬ್ಬುಗಳು ಮತ್ತು ನಾರಿನಾಂಶ ಹಸಿವನ್ನು ತಡೆಯಲು ಸಹಾಯ ಮಾಡುತ್ತದೆ. ಇದು ತೂಕ ನಿಯಂತ್ರಣದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.
Pexels
ಭಾರತ ಮತ್ತು ಪಾಕಿಸ್ತಾನ ಬೇರ್ಪಡಿಸಲು ವಾದಿಸಿದ ವಕೀಲ ಯಾರು?