ತುಳಸಿಯಿಂದ ಪುಣ್ಯದೊಂದಿಗೆ ಆರೋಗ್ಯಲಾಭವೂ ಇದೆ

By Raghavendra M Y
Jul 28, 2024

Hindustan Times
Kannada

ತುಳಸಿಯಲ್ಲಿ ಮಧುಮೇಹ ನಿವಾರಕ ಗುಣವಿದೆ. ತುಳಸಿ ಎಲೆಯ ಸಾರವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ

ತುಳಸಿಯಲ್ಲಿ ಒತ್ತಡ, ಆತಂಕ ಹಾಗೂ ಖಿನ್ನತೆಯನ್ನು ಕಡಿಮೆ ಮಾಡುವ ಸಂಯುಕ್ತಗಳಿವೆ. ತುಳಸಿಯ ಎಲೆಗಳು ಹೃದಯದ ಆರೋಗ್ಯಕ್ಕೆ ಒಳ್ಳೆಯದು

ತುಳಸಿಯಲ್ಲಿರುವ ಯುಜೆನಾಲ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆ ಕಡಿಮೆಯಾಗುತ್ತೆ

ತುಳಸಿಯು ಆಯುರ್ವೇದ ಔಷಧದಲ್ಲಿ ಒಂದು ಮೂಲಕೆಯಾಗಿದೆ. ಈ ಎಲೆಗಳು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ

ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ತುಳಸಿ ಹೊಂದಿದೆ. ಸಂಧಿವಾತ, ಉಸಿರಾಟದ ತೊಂದರೆ, ಹೊಟ್ಟೆಯೆಲ್ಲಿ ಹುಣ್ಣು, ಮೂತ್ರದ ಸಮಸ್ಯೆ, ಚರ್ಮ ರೋಗಗಳಿಗೆ ಪರಿಣಾಮಕಾರಿಯಾಗಿದೆ

ತುಳಸಿ ಎಲೆಗಳನ್ನು ಸೇವಿಸುವುದರಿಂದ ಹೊಟ್ಟೆಗೂ ಒಳ್ಳೆಯದು. ಇದನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ

ತೂಕವನ್ನು ಕಡಿಮೆ ಮಾಡಿಕೊಳ್ಳಲು ತುಳಸಿ ಸಹಕಾರಿಯಾಗಿದೆ. ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಬೆಳಗ್ಗೆ 3 ರಿಂದ 8 ತುಳಸಿ ಎಲೆಗಳನ್ನು ತಿನ್ನಲು ಆಯುರ್ವೇದ ತಜ್ಞರು ಸಲಹೆ ನೀಡುತ್ತಾರೆ

ಐಪಿಎಲ್​ನಲ್ಲಿ ನೂತನ ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ