ಪ್ರತಿದಿನ ರಾತ್ರಿ 2 ಏಲಕ್ಕಿ ಜಗಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳಿವು
By Reshma Mar 14, 2024
Hindustan Times Kannada
ಏಲಕ್ಕಿಯು ಹಲವು ಪೋಷಕಾಂಶಗಳನ್ನು ಒಳಗೊಂಡಿದ್ದು, ಇದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ರಾತ್ರಿ ಮಲಗುವ ಮುನ್ನ ಏಲಕ್ಕಿ ಜಗಿಯುವುದರಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ.
ರಾತ್ರಿ ಏಲಕ್ಕಿ ತಿನ್ನುವುದರಿಂದ ನಿದ್ದೆಯ ಗುಣಮಟ್ಟ ಸುಧಾರಿಸುತ್ತದೆ. ಏಲಕ್ಕಿಯನ್ನು ಜಗಿಯುವುದು ಹಾಗೂ ಏಲಕ್ಕಿ ಕುದಿಸಿದ ನೀರು ಕುಡಿಯುವುದರಿಂದ ನಿದ್ರಾಹೀನತೆಯ ಸಮಸ್ಯೆ ನಿವಾರಣೆಯಾಗುತ್ತದೆ.
ಏಲಕ್ಕಿ ಜಗಿಯುವುದರಿಂದ ಜೀರ್ಣಕ್ರಿಯೆ ವೃದ್ಧಿಸುತ್ತದೆ. ಇದು ಮಲಬದ್ಧತೆಯಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.
ಬಾಯಿಯ ದುರ್ವಾಸನೆ ನಿವಾರಣೆಗೆ ಏಲಕ್ಕಿ ಜಗಿಯುವುದು ಉತ್ತಮ ಪರಿಹಾರ.
ಏಲಕ್ಕಿ ಜಗಿಯುವುದರಿಂದ ರಕ್ತಸಂಚಾರ ಸುಧಾರಿಸುತ್ತದೆ. ಏಲಕ್ಕಿ ಜಗಿದು ನಂತರ ಬೆಚ್ಚಗಿನ ನೀರು ಕುಡಿಯಬೇಕು.
ಏಲಕ್ಕಿಯಲ್ಲಿ ವಿಟಮಿನ್ ಸಿ, ಬಿ6, ಬಿ1 ಹಾಗೂ ಖನಿಜಾಂಶಗಳಿವೆ. ಆದ್ದರಿಂದ ನೀವು ಪ್ರತಿದಿನ ಸೇವಿಸುವುದರಿಂದ ತೂಕ ಇಳಿಕೆಗೆ ಸಹಕರಿಸುತ್ತದೆ.