ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆ ತಿನ್ನೋದ್ರಿಂದ ಸಿಗುವ 7 ಪ್ರಯೋಜನಗಳು  

By Reshma
Aug 22, 2024

Hindustan Times
Kannada

ಅಡುಗೆಯ ಘಮ ಹೆಚ್ಚಿಸುವ ಕರಿಬೇವಿನ ಎಲೆಯಲ್ಲಿ ಪ್ರೊಟೀನ್‌, ಕೊಬ್ಬು, ಕಾರ್ಬೊಹೈಡ್ರೇಟ್‌, ವಿಟಮಿನ್‌ ಸಿ, ಕ್ಯಾರೊಟಿನ್‌, ಕ್ಯಾಲ್ಸಿಯಂ, ಕಬ್ಬಿಣಾಂಶ ಸೇರಿದಂತೆ ಹಲವು ಪೋಷಕಾಂಶಗಳು ಹೇರಳವಾಗಿರುತ್ತವೆ. 

ಇದನ್ನು ಪ್ರತಿನಿತ್ಯ ಬಳಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದನ್ನು ಖಾಲಿಹೊಟ್ಟೆಯಲ್ಲಿ ತಿಂದರೆ ಏನೆಲ್ಲಾ ಉಪಯೋಗವಿದೆ ನೋಡಿ

ಕರಿಬೇವಿನ ಎಲೆಯಲ್ಲಿ ವಿಟಮಿನ್‌ ಸಿ ಹೇರಳವಾಗಿದೆ. ಇದನ್ನು ಪ್ರತಿದಿನ ಖಾಲಿಹೊಟ್ಟೆಯಲ್ಲಿ ತಿನ್ನುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ

ಕರಿಬೇವಿನ ಎಲೆಯಲ್ಲಿ ಕ್ಯಾಲ್ಸಿಯಂ ಅಂಶ ಹೇರಳವಾಗಿದೆ. ಇದು ಮೂಳೆಗಳನ್ನು ಬಲಪಡಿಸಲು ಪ್ರಯೋಜನಕಾರಿ 

ಪ್ರತಿದಿನ ಕರಿಬೇವಿನ ಎಲೆ ತಿನ್ನುವ ಅಭ್ಯಾಸ ರೂಢಿಸಿಕೊಂಡರೆ ರಕ್ತದ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಬ್ಲಡ್‌ ಕೌಂಟ್‌ ಹೆಚ್ಚಿ, ರಕ್ತಹೀನತೆಯಂತಹ ಸಮಸ್ಯೆ ನಿವಾರಣೆಯಾಗುತ್ತದೆ 

ಕರಿಬೇವಿನ ಎಲೆಗಳಲ್ಲಿ ಪೊಟ್ಯಾಶಿಯಂ ಸಮೃದ್ಧವಾಗಿದೆ. ಇದನ್ನು ಪ್ರತಿನಿತ್ಯ ಜಗಿಯುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು 

ಈ ಎಲೆ ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್‌ ಮತ್ತು ಆಂಟಿಫಂಗಲ್‌ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಇದರ ಸೇವನೆಯಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಕರಿಬೇವಿನ ಎಲೆಯಲ್ಲಿ ಉತ್ಕರ್ಷಣ ನಿರೋಧಕ ಅಂಶ ಕೂಡ ಇದೆ 

ಮಧುಮೇಹ ಹೊಂದಿರುವವರು ಕೂಡ ಖಾಲಿಯಲ್ಲಿ ಕರಿಬೇವಿನ ಎಲೆಗಳನ್ನು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣಕ್ಕೆ ತರಬಹುದು

ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆ ಸೇವಿಸುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಕೊಲೆಸ್ಟ್ರಾಲ್‌ ಕೂಡ ನಿಯಂತ್ರಣದಲ್ಲಿರುತ್ತದೆ. ಇದರಿಂದ ದೇಹದಲ್ಲಿ ಕೊಬ್ಬು ಕೂಡ ಕರಗುತ್ತದೆ 

ಈ ಸುದ್ದಿಯ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನ ಸಂಪರ್ಕಿಸಿ 

ಇದು ಏಳೇಳು ಜನುಮಗಳ ಅನುಬಂಧ, ಪತಿ-ಪತ್ನಿ ನಡುವೆ ಇರಲಿ ಪ್ರೀತಿ