ಮಾವಿನ ಹಣ್ಣಿನ ಆರೋಗ್ಯ ಪ್ರಯೋಜನಗಳಿವು

By Priyanka Gowda
May 14, 2025

Hindustan Times
Kannada

ಬೇಸಿಗೆ ಪ್ರಾರಂಭವಾದ ತಕ್ಷಣ, ಜನರು ಮಾವಿನಹಣ್ಣುಗಳಿಗಾಗಿ ಕಾಯುತ್ತಾರೆ. ಮಾವಿನಹಣ್ಣು ರುಚಿಕರವಾಗಿರುವುದಲ್ಲದೆ ದೇಹಕ್ಕೆ ಅನೇಕ ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತದೆ. ಇಲ್ಲಿವೆ ಮಾವಿನಹಣ್ಣಿನ 6 ಪ್ರಯೋಜನಗಳು.

Image Credits: Adobe Stock

ಜೀರ್ಣಕಾರಿ ಆರೋಗ್ಯವನ್ನು ಉತ್ತೇಜಿಸುತ್ತದೆ

Image Credits: Adobe Stock

ಮಾವಿನಹಣ್ಣಿನಲ್ಲಿ ನಾರಿನಂಶವಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಹೊಟ್ಟೆ ಉಬ್ಬರ, ಮಲಬದ್ಧತೆ, ಅಜೀರ್ಣದಂತಹ ಜೀರ್ಣಕಾರಿ ಅಸ್ವಸ್ಥತೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

Image Credits: Adobe Stock

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

Image Credits: Adobe Stock

ಮಾವಿನಹಣ್ಣಿನಲ್ಲಿರುವ ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳ ಪ್ರಮಾಣವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. 

Image Credits: Adobe Stock

ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ

Image Credits: Adobe Stock

ಮಾವಿನಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ಹೃದಯರಕ್ತನಾಳದ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. 

Image Credits: Adobe Stock

ಕಣ್ಣುಗಳಿಗೆ ಒಳ್ಳೆಯದು

Image Credits: Adobe Stock

ಮಾವಿನ ಹಣ್ಣಿನಲ್ಲಿ ವಿಟಮಿನ್ ಎ ಇದ್ಧು, ಉತ್ತಮ ದೃಷ್ಟಿಗೆ ಅವಶ್ಯಕವಾಗಿದೆ. ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. 

Image Credits: Adobe Stock

ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿ

Image Credits: Adobe Stock

ಮಾವಿನಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಗುಣವಿದೆ. ಇದು ಚರ್ಮವನ್ನು ಫ್ರೀ ರಾಡಿಕಲ್‍ಗಳ ಪರಿಣಾಮಗಳಿಂದ ರಕ್ಷಿಸುತ್ತದೆ ಮತ್ತು ಚರ್ಮದ ಕೋಶಗಳು ಹಾನಿಯಾಗದಂತೆ ತಡೆಯುತ್ತದೆ. 

Image Credits: Adobe Stock

ತೂಕ ಇಳಿಕೆಗೆ ಸಹಾಯ ಮಾಡುತ್ತದೆ

Image Credits: Adobe Stock

ಮಾವಿನಹಣ್ಣಿನಲ್ಲಿರುವ ನಾರಿನಂಶ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತಿರಲು ಸಹಾಯ ಮಾಡುತ್ತದೆ. ಕ್ಯಾಲೊರಿ ಸೇವನೆಯೂ ಸೀಮಿತವಾಗಿರುತ್ತದೆ. ಆದರೆ, ಮಾವಿನ ಹಣ್ಣನ್ನು ಯಾವಾಗಲೂ ಮಿತವಾಗಿ ಸೇವಿಸಬೇಕು.

Image Credits: Adobe Stock

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS