ತುಳಸಿ ನೀರು ಕುಡಿಯುವುದರಿಂದ ಎಷ್ಟೆಲ್ಲಾ ಲಾಭ? ಆರೋಗ್ಯಕ್ಕೆ ಇದು ಸಂಜೀವಿನಿ

By Raghavendra M Y
Jun 18, 2024

Hindustan Times
Kannada

ತುಳಸಿ ಗಿಡವನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗಿದೆ. ಭಕ್ತಿಗೆ ಅಷ್ಟೇ ಅಲ್ಲದೆ, ತುಳಸಿಯಲ್ಲಿ ಹಲವಾರು ಔಷಧೀಯ ಗುಣಗಳಿಗೆ

ಉಸಿರಾಟದ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ, ಒತ್ತಡ, ಮಾನಸಿಕ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ತುಳಸಿಯನ್ನು ಬಳಸಲಾಗುತ್ತೆ

ತುಳಸಿ ನೀರನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜಗಳಿವೆ. ಇವುಗಳನ್ನು ಇಲ್ಲಿ ತಿಳಿಯೋಣ

ರೋಗ ನಿರೋಧ ಶಕ್ತಿ - ತುಳಸಿಯಲ್ಲಿ ಆಂಟಿಆಕ್ಸಿಡೆಂಟ್‌ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ದೇಹದ ರಕ್ಷಣಾ ಕಾರ್ಯವಿಧಾನಗಳನ್ನು ಬಲಪಡಿಸುತ್ತೆ

ಒತ್ತಡ, ಆತಂಕವನ್ನು ನಿವಾರಿಸುತ್ತೆ - ತುಳಸಿಯಲ್ಲಿನ ಅಡಾಪ್ಟೋಜೆನ್ ಅಂಶ ಒತ್ತಡ ಮತ್ತು ಆತಂಕವನ್ನು ನಿಭಾಯಿಸಲು ಸಹಕಾರಿ. ಮಾನಸಿಕ ಸ್ಪಷ್ಟತೆಯನ್ನ ಉತ್ತೇಜಿಸುತ್ತೆ

ಜೀರ್ಣಕ್ರಿಯೆ ಸಮಸ್ಯೆಗಳನ್ನು ಕಡಿಮೆ ಮಾಡುತ್ತೆ - ತುಳಸಿಯಲ್ಲಿನ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುತ್ತೆ. ಉಬ್ಬುವಿಕೆ, ಗ್ಯಾಸ್, ಅರ್ಜೀರ್ಣ ಸಮಸ್ಯೆಗಳನ್ನ ನಿವಾರಿಸುತ್ತದೆ

ಉಸಿರಾಟದ ಆರೋಗ್ಯ - ತುಳಸಿಯು ಉರಿಯೂತ, ಆಂಟಿವೈರಲ್, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಉಸಿರಾಟದ ಕಾಯಿಲೆ ನಿವಾರಣೆಗೆ ಸಹಾಯ ಮಾಡುತ್ತೆ

ತ್ವಚೆಯ ಆರೋಗ್ಯ, ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ನಿರ್ವಿಶೀಕರಣ, ಹೃದಯದ ಆರೋಗ್ಯದ ಆರೋಗ್ಯವನ್ನು ಸುಧಾರಿಸಲು ತುಳಸಿಯ ನೀರು ಸಹಕಾರಿಯಾಗಿದೆ

ಗಮನಿಸಿ: ಇದು ತಜ್ಞರ ಮಾಹಿತಿ ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ 

ಭಾರತದ ರೈಲು ನಿಲ್ದಾಣಗಳಲ್ಲಿ ಸಿಗುವ 10 ಜನಪ್ರಿಯ ತಿನಿಸುಗಳಿವು