ನುಗ್ಗೇಕಾಯಿ ಸೊಪ್ಪಿನಲ್ಲಿದೆ ನೀವು ಊಹಿಸಲಾಗಂಥ ಆರೋಗ್ಯ ಲಾಭಗಳು

Pexels

By Rakshitha Sowmya
Mar 26, 2024

Hindustan Times
Kannada

ಹೊರಗೆ ಸುಲಭವಾಗಿ ಸಿಗುವಂಥ ನುಗ್ಗೇಸೊಪ್ಪಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಇದನ್ನೂ ಮೊರಿಂಗಾ ಎಂದೂ ಕರೆಯುತ್ತಾರೆ.

pixa bay

ನುಗ್ಗೇಸೊಪ್ಪು ಸೇವಿಸುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾಗುತ್ತದೆ. ಇದು ವಿವಿಧ ಪೋಷಕಾಂಶಗಳಿಂದ ಕೂಡಿದೆ. ವಿಟಮಿನ್ ಬಿ, ಬಿ2 ಮತ್ತು ಸಿ  ಇದರಲ್ಲಿ ಸಮೃದ್ಧವಾಗಿದೆ.

Pexels

ನುಗ್ಗೇಸೊಪ್ಪು ಮಾತ್ರವಲ್ಲದೆ ಅದರ ಹೂಗಳನ್ನೂ ಬೇಯಿಸಿ ತಿನ್ನಬಹುದು. ಇದರಿಂದ ದೇಹದ ಶಕ್ತಿ ಹೆಚ್ಚುತ್ತದೆ. ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಕಣ್ಣಿನ ತೊಂದರೆಗಳು, ಪಿತ್ತ ಸಂಬಂಧಿ ಕಾಯಿಲೆಗಳಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ. ಇದರ ಕಾಂಡವು ಔಷಧೀಯ ಗುಣಗಳಿಂದ ಕೂಡಾ ಸಮೃದ್ಧವಾಗಿದೆ.

Pexels

ಕೆಮ್ಮು, ಶೀತವನ್ನು ತೊಡೆದು ಹಾಕಲು ಮೊರಿಂಗಾ ಸಹಾಯ ಮಾಡುತ್ತದೆ. ಈ ತರಕಾರಿ ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ದೇಹದ ನೋವಿಗೆ ಮೊರಿಂಗಾ ಬೇರಿನ ರಸ ಅಥವಾ ಸೂಪ್ ಕುಡಿಯುವುದು ಒಳ್ಳೆಯದು.

Pexels

ನುಗ್ಗೇಸೊಪ್ಪು ಗರ್ಭಿಣಿಯರಿಗೆ ತುಂಬಾ ಒಳ್ಳೆಯದು. ಮುಖ್ಯವಾಗಿ ಮೊರಿಂಗಾ, ಎದೆ ಹಾಲು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ಹಾಲುಣಿಸುವ ತಾಯಂದಿರು ಇದನ್ನು ತಿಂದರೆ ಮಗುವಿಗೆ ಸಾಕಷ್ಟು ಎದೆ ಹಾಲು ದೊರೆಯುತ್ತದೆ. 

Pexels

ಬಂಜೆತನ ಮತ್ತು ಶಕ್ತಿಹೀನತೆಯಿಂದ ಬಳಲುತ್ತಿರುವವರು ನುಗ್ಗೇಸೊಪ್ಪು ಸೇವಿಸಿದರೆ ಬಹಳ ಉಪಯುಕ್ತ.  ಮೊರಿಂಗಾ ಹೂವನ್ನು ಹಾಲಿನಲ್ಲಿ ಕುದಿಸಿ ಸೇವಿಸುವುದರಿಂದ ಪುರುಷರಿಗೆ ಬಹಳ ಒಳ್ಳೆಯದು. 

Pexels

 ಮಕ್ಕಳಿಗೆ ಕೂಡಾ ನುಗ್ಗೇಸೊಪ್ಪು ಮಕ್ಕಳಿಗೆ ಕೂಡಾ ಒಳ್ಳೆಯದು 

Pexels

ಆದ್ದರಿಂದ ನಿಮ್ಮ ದೇಹಕ್ಕೆ ಅಗತ್ಯವಿರುವ ಪ್ರಯೋಜನಗಳನ್ನು ಪಡೆಯಲು ನಿಯಮಿತವಾಗಿ ನಿಮ್ಮ ಆಹಾರದಲ್ಲಿ ನುಗ್ಗೇಸೊಪ್ಪು ಸೇರಿಸಿ.

pixa bay

ಟಿ20 ವಿಶ್ವಕಪ್​ನಲ್ಲಿ ಅತಿವೇಗದ ಅರ್ಧಶಕತ ಬಾರಿಸಿದವರು!