ಸೋರೆಕಾಯಿ  ತಿನ್ನುವುದರಿಂದ ಆರೋಗ್ಯಕ್ಕಾಗುವ ಅದ್ಭುತ ಪ್ರಯೋಜನಗಳಿವು

By Reshma
Sep 02, 2024

Hindustan Times
Kannada

ಸೋರೆಕಾಯಿ ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣಾಂಶ, ಮೆಗ್ನಿಶಿಯಂ, ಪೊಟ್ಯಾಶಿಯಂ ಹಾಗೂ ಸತುವಿನಂತಹ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ

ನಿರಂತರವಾಗಿ ಸೋರೆಕಾಯಿ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ

ಇದು ಕಡಿಮೆ ಕ್ಯಾಲೊರಿ ಹಾಗೂ ಹೆಚ್ಚಿನ ನಾರಿನಾಂಶ ಹೊಂದಿರುವ ತರಕಾರಿ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯಬಹುದು

ಸೋರೆಕಾಯಿಯಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಅಂಶಗಳಿದ್ದು, ಇದು ಮೂಳೆಗಳನ್ನು ಬಲಪಡಿಸಲು ಪ್ರಯೋಜನಕಾರಿ 

ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೋರೆಕಾಯಿ ಉತ್ತಮ 

ಸೋರೆಕಾಯಿಯು ಸಾಕಷ್ಟು ನಾರಿನಾಂಶ ಹೊಂದಿದ್ದು, ಇದು ಜೀರ್ಣಕ್ರಿಯೆ ಉತ್ತಮವಾಗಲು ಸಹಕರಿಸುತ್ತದೆ 

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸೋರೆಕಾಯಿ ಉತ್ತಮ, ಮಧುಮೇಹಿಗಳು ವೈದ್ಯರ ಸಲಹೆ ಪಡೆದು ಸೋರೆಕಾಯಿ ತಿನ್ನಬಹುದು

ಬಾಟಲ್ ಸೋರೆಕಾಯಿಯು ಸಾಕಷ್ಟು ಪ್ರಮಾಣದ ಉತ್ಕರ್ಷಣ ನಿರೋಧಕಗಳು ಮತ್ತು ನೀರಿನಾಂಶವನ್ನು ಹೊಂದಿರುತ್ತದೆ. ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಹಾಗೂ ಚರ್ಮದ ಹೊಳಪು ಹೆ‌ಚ್ಚಲು ಸಹಕಾರಿ 

ಸೋರೆಕಾಯಿಯಲ್ಲಿರುವ ಪೋಷಕಾಂಶಗಳಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊರ ಹಾಕಲು ಹಾಗೂ ಉತ್ತಮ ಕೊಲೆಸ್ಟ್ರಾಲ್  ಪ್ರಮಾಣ ಹೆಚ್ಚಲು ಸಹಕಾರಿ

ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ 

ಐಪಿಎಲ್: ಪವರ್​​ಪ್ಲೇನಲ್ಲಿ ಅತಿಹೆಚ್ಚು ರನ್ ಚಚ್ಚಿದವರು