ಪ್ರತಿದಿನ 1 ಚಮಚ ಅಗಸೆ ಬೀಜ ತಿನ್ನುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ 

pixa bay

By Reshma
Mar 20, 2024

Hindustan Times
Kannada

ಒಂದು ಚಮಚ ಅಗಸೆ ಬೀಜದಲ್ಲಿ 2 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 3 ಗ್ರಾಂ ಕೊಬ್ಬು, 2 ಗ್ರಾಂ ನಾರಿನಾಂಶ, 1.3 ಗ್ರಾಂ ಪ್ರೊಟೀನ್, 10 ಪ್ರತಿಶತ ಥಯಾಮಿನ್, 9 ಪ್ರತಿಶತ ತಾಮ್ರ, 8 ಪ್ರತಿಶತ ಮ್ಯಾಂಗನೀಸ್, 7 ಪ್ರತಿಶತ ಮೆಗ್ನೀಸಿಯಮ್, 4 ಪ್ರತಿಶತ ರಂಜಕ, 3 ಪ್ರತಿಶತ ಸೆಲೆನಿಯಮ್, 3 ಪ್ರತಿಶತ ಸತು, 2 ಪ್ರತಿಶತ ವಿಟಮಿನ್ ಬಿ 6, ಕಬ್ಬಿಣ ಮತ್ತು ಫೋಲೇಟ್ ಅಂಶವಿರುತ್ತದೆ. 

pixa bay

ಅಗಸೆಬೀಜಗಳು ಥಯಾಮಿನ್ ಮತ್ತು ವಿಟಮಿನ್ ಬಿಯಲ್ಲಿ ಸಮೃದ್ಧವಾಗಿವೆ, ಇದು ಚಯಾಪಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅವು ಜೀವಕೋಶಗಳ ಕಾರ್ಯನಿರ್ವಹಣೆಯನ್ನೂ ಮಾಡುತ್ತವೆ.

pixa bay

ಅಗಸೆ ಬೀಜದಲ್ಲಿ ತಾಮ್ರದ ಅಂಶ ಸಮೃದ್ಧವಾಗಿದೆ. ಇದು ಮೆದುಳಿನ ಬೆಳವಣಿಗೆ, ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆ ವೃದ್ಧಿಸಲು ಸಹಾಯ ಮಾಡುತ್ತದೆ.

pixa bay

ಇದರಲ್ಲಿ ಒಮೆಗಾ -3 ಕೊಬ್ಬಿನಾಮ್ಲ ಹೇರಳವಾಗಿರುವ ಕಾರಣ ಇದು ಕ್ಯಾನ್ಸರ್ ವಿರುದ್ಧ ರಕ್ಷಣೆಗೆ ನೆರವಾಗುತ್ತದೆ. ನಾರಿನಾಂಶ ಹೆಚ್ಚಿರುವ ಕಾರಣ ತೂಕ ಇಳಿಕೆಗೂ ಸಹಕಾರಿ.

pixa bay

ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. 

Unsplash

ಇದರಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣ ಕಡಿಮೆ ಇರುತ್ತದೆ. ಆ ಕಾರಣಕ್ಕೆ ಇದರ ಸೇವನೆ ಹೃದಯದ ಆರೋಗ್ಯಕ್ಕೂ ಉತ್ತಮ. 

pixa bay

ಅಧಿಕ ರಕ್ತದೊತ್ತಡ ನಿವಾರಣೆಗೂ ಫ್ಲ್ಯಾಕ್ಸ್‌ ಸೀಡ್‌ ಉತ್ತಮ. 

pixa bay

ಭಾರತದ ಮುಂದಿನ ಸಿಜೆಐ ನ್ಯಾಯಮೂರ್ತಿ ಬಿಆರ್ ಗವಾಯಿ ಅವರ ಕಿರುಪರಿಚಯ

Photo Credit: ANI