ಬೆಳಿಗ್ಗೆ ಉಪಾಹಾರ ಸೇವಿಸಲು ಸರಿಯಾದ ಸಮಯ ಯಾವುದು? ಇಲ್ಲಿದೆ ಮಾಹಿತಿ 

By Reshma
Aug 15, 2024

Hindustan Times
Kannada

ನಾವು ಸೇವಿಸುವ ಆಹಾರವು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಆಹಾರಕ್ರಮ ಸರಿಯಿಲ್ಲ ಎಂದರೆ ಔಷಧಿಗಳೂ ಪರಿಣಾಮ ಬೀರುವುದಿಲ್ಲ. 

ಸಾಮಾನ್ಯವಾಗಿ ಜನರು ಬೆಳಗಿನ ಉಪಾಹಾರ ಸೇವಿಸಲು ನಿಗದಿತ ಸಮಯವನ್ನು ಹೊಂದಿರುವುದಿಲ್ಲ. ನಾವು ಕೆಲವೊಮ್ಮೆ ಬೇಗನೆ ತಿಂಡಿ ತಿನ್ನುತ್ತೇವೆ. ಕೆಲವೊಮ್ಮೆ ತಡವಾಗುತ್ತದೆ. 

ಜನರು ಒಂದೇ ಸಮಯದಲ್ಲಿ ಎಚ್ಚರಗೊಳ್ಳದ ಕಾರಣ ಈ ರೀತಿ ತಿಂಡಿ ತಿನ್ನುವ ಸಮಯದಲ್ಲಿ ವ್ಯತ್ಯಯವಾಗುತ್ತದೆ. 

ವೈದ್ಯರ ಪ್ರಕಾರ ನಾವು ಒಂದು ನಿರ್ದಿಷ್ಟ ಸಮಯದಲ್ಲಿ ಬೆಳಗಿನ ಉಪಾಹಾರ ಸೇವಿಸಬೇಕು. ಆ ಸಮಯದ ಯಾವುದು ನೋಡಿ. 

ನಿದ್ದೆಯಿಂದ ಎದ್ದ 2 ಗಂಟೆಯೊಳಗೆ ಉಪಾಹಾರ ಸೇವಿಸಬೇಕು ಎನ್ನುತ್ತಾರೆ ತಜ್ಞರು

ನೀವು ಬೆಳಿಗ್ಗೆ 6 ರಿಂದ 7 ಗಂಟೆ ನಡುವೆ ಏಳುವವರಾದರೆ ಬೆಳಿಗ್ಗೆ 8 ರಿಂದ 9 ಗಂಟೆ ಉಪಾಹಾರ ಸೇವಿಸಲು ಉತ್ತಮ ಸಮಯ.

ಬೆಳಗಿನ ಉಪಾಹಾರ ದಿನದ ಅತ್ಯುತ್ತಮ ಆಹಾರವಾಗಿರಬೇಕು. ಇದರಲ್ಲಿ ಹಣ್ಣು, ತರಕಾರಿ, ಒಣಹಣ್ಣುಗಳು ಎಲ್ಲವೂ ಇರಬೇಕು. 

ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನ ಸಂಪರ್ಕಿಸಿ.

ಯಶಸ್ವಿಯಾಗಿ ತತ್ಕಾಲ್‌ ರೈಲು ಟಿಕೆಟ್‌ ಬುಕ್‌ ಮಾಡಲು ಪ್ರಮುಖ ಸಲಹೆಗಳು