ಬೆಳಗಿನ ಉಪಾಹಾರದ ಹೊತ್ತು ಸೇವಿಸಲೇಬಾರದಂತಹ 7 ಹಣ್ಣುಗಳಿವು 

By Reshma
May 30, 2024

Hindustan Times
Kannada

ನಾವು ಬೆಳಗಿನ ಹೊತ್ತು ಸೇವಿಸುವ ಆಹಾರವು ನಮ್ಮ ಆರೋಗ್ಯ ಕಾಪಾಡುವ ಜೊತೆಗೆ ದೇಹವನ್ನು ಫಿಟ್‌ ಆಗಿ ಇರಿಸಲು ಸಹಾಯ ಮಾಡುತ್ತದೆ. 

ಆ ಕಾರಣಕ್ಕೆ ಬೆಳಗಿನ ಉಪಾಹಾರದ ಹೊತ್ತು ಆರೋಗ್ಯಕರ ಆಹಾರಗಳನ್ನ ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ. 

ಫಿಟ್‌ನೆಸ್‌ ಕಾಯ್ದುಕೊಳ್ಳಲು ಬಯಸುವವರು ಬೆಳಗಿನ ಹೊತ್ತು ಉಪಹಾರಕ್ಕಾಗಿ ಹಣ್ಣುಗಳನ್ನು ತಿನ್ನುವುದು ಸಹಜ. ಇದು ಆರೋಗ್ಯಕರ ವಿಧಾನವಾದ್ರೂ ಕೆಲವು ಹಣ್ಣುಗಳು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತವೆ.

ಕಲ್ಲಂಗಡಿ ಹಣ್ಣಿನಲ್ಲಿ ಸಾಕಷ್ಟು ನೀರಿನಾಂಶವಿದ್ದು, ಇದನ್ನು ತಿಂದು ಹೊರಗಡೆ ಹೋದಾಗ ನಿಮಗೆ ಬೇಗನೆ ಹಸಿವಾಗಬಹುದು. 

ಮಾವಿನಹಣ್ಣಿನಲ್ಲಿ ಸಕ್ಕರೆಯಂಶ ಅಧಿಕವಾಗಿರುತ್ತದೆ. ಬೆಳಗಿನ ಉಪಾಹಾರದಲ್ಲಿ ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಬಹುದು. ಇದರ ಉಷ್ಣ ಸ್ವಭಾವದಿಂದ ಇದು ಜೀರ್ಣಕ್ರಿಯೆಗೆ ತೊಂದರೆ ಮಾಡಬಹುದು.

ಬೆಳಗಿನ ಉಪಾಹಾರದ ಹೊತ್ತು ನಿಂಬೆಹಣ್ಣು ಸೇವಿಸಬಾರದು. ಇದು ಆಸಿಡಿಟಿ ಹಾಗೂ ಗ್ಯಾಸ್ಟ್ರಿಕ್‌ ಸಮಸ್ಯೆ ಉಂಟು ಮಾಡಬಹುದು.

ಬಾಳೆಹಣ್ಣಿನಲ್ಲಿ ಮೆಗ್ನಿಶಿಯಂ ಮತ್ತು ಪೊಟ್ಯಾಶಿಯಂ ಅಂಶವಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಈ ಖನಿಜಾಂಶಗಳಲ್ಲಿ ಅಸಮತೋಲನ ಉಂಟಾಗಬಹುದು. ಇದು ಆರೋಗ್ಯಕ್ಕೆ ಹಾನಿಕರ. 

ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದರೂ ಬೆಳಗಿನ ಉಪಾಹಾರಕ್ಕಾಗಿ ದ್ರಾಕ್ಷಿ ತಿನ್ನಬಾರದು. ಏಕೆಂದರೆ ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡುತ್ತದೆ. 

ಸ್ಟ್ರಾಬೆರಿಯನ್ನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಆಮ್ಲೀಯತೆ, ಎದೆಯುರಿ, ಗ್ಯಾಸ್ಟ್ರಿಕ್‌ ಸಮಸ್ಯೆಗಳು ಉಂಟಾಗಬಹುದು. 

ಬೆಳಗಿನ ಹೊತ್ತು ಕಿತ್ತಳೆ ಹಣ್ಣು ಸೇವಿಸುವುದು ಕೂಡ ತಪ್ಪಿಸಬೇಕು. ಇದು ಆಮ್ಲೀಯ ಗುಣಗಳಿಂದ ಎದೆಯುರಿ, ಗ್ಯಾಸ್ಟ್ರಿಕ್‌ ಸಮಸ್ಯೆಗಳು ಉಂಟಾಗಬಹುದು. 

ಈ ಸುದ್ದಿಯ ಸಾಮಾನ್ಯ ಮಾಹಿತಿಯನ್ನ ಆಧರಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸುವುದು ಉತ್ತಮ. 

ಕೆಳ ಬೆನ್ನು ನೋವಿನ ಶಮನಕ್ಕೆ ಸರಳ ಯೋಗಗಳು

pixabay