ಪ್ರತಿದಿನ ಬೆಲ್ಲ ತಿಂದ್ರೆ ತೂಕ ಏರಿಕೆಯಾಗುತ್ತಾ? ಇಲ್ಲಿದೆ ಉತ್ತರ
By Reshma Aug 19, 2024
Hindustan Times Kannada
ಬೆಲ್ಲ ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದರಲ್ಲಿ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳು ಲಭ್ಯವಿರುತ್ತವೆ
ಬೆಲ್ಲವು ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ದೇಹಕ್ಕೆ ಅಗತ್ಯವಾದ ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ
ಪ್ರತಿದಿನ ಬೆಲ್ಲ ತಿನ್ನುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಇದರಿಂದ ದೇಹವು ಬಲಗೊಳ್ಳುತ್ತದೆ
ದಿನನಿತ್ಯ ಬೆಲ್ಲ ಸೇವಿಸುವುದರಿಂದ ತೂಕ ಹೆಚ್ಚಾಗಬಹುದೇ ಎಂಬ ಪ್ರಶ್ನೆ ಕೆಲವರ ಮನಸ್ಸಿನಲ್ಲಿದೆ. ಈ ಪ್ರಶ್ನೆಗೆ ತಜ್ಞರ ಉತ್ತರವೇನು ನೋಡಿ.
ಆರೋಗ್ಯ ತಜ್ಞರ ಪ್ರಕಾರ ಬೆಲ್ಲದಲ್ಲಿ ಕ್ಯಾಲೊರಿ ಪ್ರಮಾಣ ಅಧಿಕವಾಗಿದೆ. ಇದು ಹೆಚ್ಚಿನ ಪ್ರಮಾಣದ ಸಿಹಿಯಂಶ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದೆ
ಈ ಅಂಶಗಳು ತೂಕ ಹೆಚ್ಚಲು ಕಾರಣವೆಂದು ಪರಿಗಣಿಸಲಾಗಿದೆ. ಹಾಗಾಗಿ ನೀವು ಪ್ರತಿದಿನ ಹೆಚ್ಚು ಬೆಲ್ಲ ತಿಂದರೆ ತೂಕ ಏರಿಕೆಯಾಗುವ ಸಾಧ್ಯತೆ ಇದೆ
ಬೆಲ್ಲದಲ್ಲಿ ಹೇರಳವಾದ ನಾರಿನಾಂಶವಿದೆ. ಇದು ಜೀರ್ಣಕ್ರಿಯೆ ಕಾಪಾಡಿಕೊಳ್ಳಲು ಪ್ರಯೋಜನಕಾರಿ. ಆರೋಗ್ಯಕರ ಜೀರ್ಣಕ್ರಿಯೆಯು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ
ಪ್ರತಿದಿನ ಬೆಲ್ಲ ಸೇವಿಸುವುದರಿಂದ ರಕ್ತದ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಹಿಮೊಗ್ಲೊಬಿನ್ ಮಟ್ಟದಲ್ಲಿ ಏರಿಕೆಯಾಗುತ್ತದೆ. ರಕ್ತದಿಂದ ವಿಷಾಂಶವನ್ನು ತೆಗೆದು ಹಾಕುತ್ತದೆ. ರಕ್ತದ ಶುದ್ಧೀಕರಣವು ತೂಕ ನಿರ್ವಹಣೆಗೆ ನೆರವಾಗುತ್ತದೆ
ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬೆಲ್ಲದಲ್ಲಿ ಸಿಹಿಯ ಪ್ರಮಾಣ ಹೆಚ್ಚಿರುತ್ತದೆ. ಆದ್ದರಿಂದ ಇದನ್ನು ತಿನ್ನುವುದರಿಂದ ದೇಹದಲ್ಲಿ ಸಕ್ಕರೆ ಮಟ್ಟ ಏರಿಕೆಯಾಗುತ್ತದೆ. ಕ್ಯಾಲೊರಿ ಪ್ರಮಾಣ ಕೂಡ ಹೆಚ್ಚಾಗಬಹುದು. ಹಾಗಾಗಿ ಅತಿಯಾಗಿ ಬೆಲ್ಲ ತಿನ್ನುವುದು ಒಳ್ಳೆಯದಲ್ಲ.
ಈ ಮಾಹಿತಿಯ ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ
ಲೆಬನಾನ್ ಸ್ಪೋಟದ ಬಳಿಕ ಸುದ್ದಿಯಲ್ಲಿರುವ ಪೇಜರ್ ಅಂದ್ರೆ ಏನು? ಇಲ್ಲಿದೆ 10 ಪಾಯಿಂಟ್ಸ್