ಪುರುಷರಲ್ಲಿ ಬೆನ್ನು ನೋವು ಹೆಚ್ಚಲು ಪ್ರಮುಖ ಕಾರಣ, ಪರಿಹಾರ ಮಾರ್ಗವೇನು ನೋಡಿ 

By Reshma
Feb 05, 2025

Hindustan Times
Kannada

ಇತ್ತೀಚಿನ ದಿನಗಳಲ್ಲಿ 40 ರಿಂದ 45 ವರ್ಷ ವಯಸ್ಸಿನ ಪುರುಷರಲ್ಲಿ ಬೆನ್ನುನೋವಿನ ಸಮಸ್ಯೆ ಪ್ರಾರಂಭವಾಗುತ್ತಿದೆ 

ಅತಿಯಾದ ಬೆನ್ನುನೋವಿನಿಂದ ಏಳುವುದು, ಕುಳಿತುಕೊಳ್ಳುವುದು ಸೇರಿ ವಿವಿಧ ಕೆಲಸಗಳನ್ನು ಮಾಡುವುದು ಕಷ್ಟವಾಗುತ್ತದೆ 

ಕುರ್ಚಿಯ ಮೇಲೆ ದೀರ್ಘಕಾಲ ಕುಳಿತುಕೊಳ್ಳುವುದು, ತ್ರಾಸದಾಯಕ ವ್ಯಾಯಮ, ಸಂಧಿವಾತ, ಗ್ಯಾಸ್ಟ್ರಿಕ್‌, ಬೊಜ್ಜು ಈ ಹಲವು ಬೆನ್ನುನೋವಿಗೆ ಪ್ರಮುಖ ಕಾರಣಗಳಾಗಿವೆ 

ನೀವು ನಿರಂತರ ಬೆನ್ನುನೋವಿನಿಂದ ಬಳಲುತ್ತಿದ್ದರೆ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಇದರಿಂದ ಸ್ವಲ್ಪ ಮಟ್ಟಿಗೆ ಪರಿಹಾರ ಸಿಗಲಿದೆ 

ಕೆಲಸ ಮಾಡುವಾಗ ದೀರ್ಘಕಾಲ ಕುಳಿತೇ ಇರಬೇಡಿ. ಆಗೊಮ್ಮ ಈಗೊಮ್ಮೆ ನಡೆದಾಡಿ. ಇದರಿಂದ ವಿಶ್ರಾಂತಿ ಸಿಗುತ್ತದೆ  

ಬೆನ್ನು ನೋವು ಗಮನದಲ್ಲಿ ಇಟ್ಟುಕೊಂಡು ಕೆಲವು ವ್ಯಾಯಾಮಗಳನ್ನು ಮಾಡಬಹುದು. ಇದು ಸ್ನಾಯುಗಳನ್ನು ಆರೋಗ್ಯಕರವಾಗಿರಿಸುತ್ತದೆ 

ಬೆನ್ನುನೋವಿಗೆ ನೀವು ಸಂಕೋಚನವನ್ನು ಸಹ ಮಾಡಬಹುದು. ಪ್ಯಾನ್ ಅನ್ನು ಬಿಸಿ ಮಾಡಿ. ಅದರ ಮೇಲೆ ಬಟ್ಟೆಯೊಂದನ್ನು ಇರಿಸಿ. ಬಟ್ಟೆ ಬಿಸಿಯಾದ ಮೇಲೆ ಇದನ್ನು ಬೆನ್ನ ಮೇಲೆ ಇಡಿ 

ಬೆನ್ನುನೋವು ತೀವ್ರವಾಗಿದ್ದರೆ ಸಾಸಿವೆ ಎಣ್ಣೆಯನ್ನು ಲಘುವಾಗಿ ಕೈಗಳಿಂದ ಮಸಾಜ್ ಮಾಡಿ. ಇದರಿಂದ ಪರಿಹಾರ ಕಂಡುಕೊಳ್ಳಬಹುದು 

ಬೆನ್ನು ನೋವು ಮುಂದುವರಿದರೆ ನಿಮ್ಮ ಭಂಗಿಯ ಮೇಲೆ ಗಮನ ಹರಿಸಿ. ನೇರವಾಗಿ ಕುಳಿತುಕೊಳ್ಳಲು ಮತ್ತು ಮಲಗಲು ಪ್ರಯತ್ನಿಸಿ, ಇದರಿಂದ ಪರಿಹಾರ ಕಂಡುಕೊಳ್ಳಬಹುದು 

ನಿಮಗೆ ಬೆನ್ನು ನೋವು ತೀವ್ರವಾಗಿದ್ದರೆ, ಸಹಿಸಲು ಸಾಧ್ಯವಿಲ್ಲದಂತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ  

ಪದಾರ್ಪಣೆ ಪಂದ್ಯದಲ್ಲೇ ವರುಣ್ ಚಕ್ರವರ್ತಿ ದಾಖಲೆ