ಮುಖದ ಮೇಲೆ ಕಾಣಿಸುವ ಈ ಚಿಹ್ನೆಗಳು ಅನಾರೋಗ್ಯದ ಸಂಕೇತ

By Reshma
Jul 03, 2024

Hindustan Times
Kannada

ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಾದಂತೆಲ್ಲಾ ಮುಖದ ಮೇಲೆ ಪರಿಣಾಮ ಕಾಣಿಸುತ್ತದೆ. 

ಕೆಲವು ರೋಗಲಕ್ಷಣಗಳನ್ನು ಸರಿಯಾದ ಸಮಯದಲ್ಲಿ ಅರ್ಥ ಮಾಡಿಕೊಂಡರೆ ಜೀವನಶೈಲಿ ಹಾಗೂ ಆಹಾರಕ್ರಮದ ಮೂಲಕ ಆರೋಗ್ಯ ಸಮಸ್ಯೆಯನ್ನು ದೂರ ಮಾಡಬಹುದು. ಅಂತಹ ಸಮಸ್ಯೆಗಳಲ್ಲಿ ಕೊಲೆಸ್ಟ್ರಾಲ್‌ ಕೂಡ ಒಂದು. 

ಲಿಪಿಡ್‌ ಪರೀಕ್ಷೆಯಿಂದ ಮಾತ್ರ ಕೊಲೆಸ್ಟ್ರಾಲ್‌ ಪ್ರಮಾಣವನ್ನು ಕಂಡುಹಿಡಿಯಬಹುದು. ಆದರೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣ ಏರಿಕೆಯಾದರೆ ಮುಖದಲ್ಲಿ ಕೆಲವು ಲಕ್ಷಣಗಳು ಗೋಚರವಾಗುತ್ತವೆ. 

ಆ ರೋಗಲಕ್ಷಣವನ್ನು ಸರಿಯಾದ ಸಮಯಕ್ಕೆ ಗುರುತಿಸಿ ಆಹಾರ ಹಾಗೂ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡರೆ ಕೊಲೆಸ್ಟ್ರಾಲ್‌ ನಿಯಂತ್ರಿಸಲು ಸಾಧ್ಯವಾಗುತ್ತದೆ. 

ಮುಖದಲ್ಲಿ ಈ ಲಕ್ಷಣಗಳು ಕಾಣಿಸಿದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಮತ್ತು ಕೊಲೆಸ್ಟ್ರಾಲ್‌ ಕಡಿಮೆ ಮಾಡಿಕೊಳ್ಳಲು ಸಲಹೆ ಕೇಳಬೇಕು. 

ಕಳಪೆ ರಕ್ತ ಪರಿಚಲನೆಯಿಂದ ಮುಖವು ಮಸುಕಾದ ಹಳದಿ ಬಣ್ಣಕ್ಕೆ ತಿರುಗುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಸಂಗ್ರಹವಾದಾಗ ಅದು ರಕ್ತಪರಿಚಲನೆಯನ್ನು ತಡೆಯುತ್ತದೆ. ಈ ಕಾರಣದಿಂದ ಚರ್ಮವು ಹಳದಿ ಬಣ್ಣಕ್ಕೆ ತಿರುಗುತ್ತದೆ. 

ಕೆಟ್ಟ ಕೊಲೆಸ್ಟ್ರಾಲ್‌ ಹೆಚ್ಚಾದಾಗ ತಿಳಿ ಹಳದಿ ದದ್ದುಗಳು, ಹಳದಿ ಬಣ್ಣದ ಸಣ್ಣ ಮೊಡವೆ ಕಣ್ಣಿನ ಸುತ್ತ ಕಾಣಿಸಿಕೊಳ್ಳುತ್ತದೆ. ಈ ರೋಗಲಕ್ಷಣಗಳು ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ಹೆಚ್ಚಿಸುವ ಸಂಕೇತವಾಗಿದೆ. 

ಮುಖದ ಮೇಲೆ ನೋವು ರಹಿತ ದದ್ದುಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಕೆಟ್ಟ ಕೊಲೆಸ್ಟ್ರಾಲ್‌ ಹೆಚ್ಚಳದಿಂದಲೂ ಕಾಣಿಸಬಹುದು ಮುಖದ ಊದಿದಂತೆ ಕಾಣಿಸಬಹುದು. ಚರ್ಮವು ಸಂಪೂರ್ಣವಾಗಿ ಒಣಗುತ್ತದೆ. 

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS