ಮಲಬದ್ಧತೆ ನಿವಾರಣೆಗೆ ಇಲ್ಲಿದೆ ಸೂಪರ್ ಮನೆಮದ್ದು
By Reshma
Jan 16, 2025
Hindustan Times
Kannada
ಮಲಬದ್ಧತೆ ಇತ್ತೀಚಿಗೆ ಹಲವರನ್ನು ಕಾಡುತ್ತಿರುವ ಸಮಸ್ಯೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾನಾ ಮಾರ್ಗ ಅನುಸರಿಸುತ್ತೇವೆ
ಮಲಬದ್ಧತೆ ನಿವಾರಣೆಗೆ ಸಾಕಷ್ಟು ಮನೆಮದ್ದುಗಳಿವೆ. ಆದರೆ ಈ ಔಷಧಿಯನ್ನು ಮ್ಯಾಜಿಕ್ ಪಾನೀಯ ಅಂತಲೇ ಕರೆಯಬಹುದು. ಮಲಬದ್ಧತೆಗೆ ನಿವಾರಣೆಗೆ ಇದು ಹೇಳಿ ಮಾಡಿಸಿದ್ದು
ಅದುವೇ ಅಕ್ಕಿ ನೀರು, ಅಕ್ಕಿಯನ್ನು ಕುದಿಸಿದ ನಂತರ ಉಳಿಯುವ ನೀರು, ಇದನ್ನು ಗಂಜಿ ಎಂದೂ ಕರೆಯುತ್ತೇವೆ, ಇದು ಮಲಬದ್ಧತೆಗೆ ಉತ್ತಮ ಪರಿಹಾರ
ಈ ನೀರು ಪಿಷ್ಟದಿಂದ ಸಮೃದ್ಧವಾಗಿದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಇದು ಹೊಟ್ಟೆಯುಬ್ಬರ ಕಡಿಮೆ ಮಾಡಲು ಸಹ ಉಪಯುಕ್ತವಾಗಿದೆ
ಅಕ್ಕಿ ನೀರಿನಲ್ಲಿ ನಿರ್ಜಲೀಕರಣವನ್ನು ತಡೆಯುವ ಎಲೆಕ್ಟ್ರೋಲೈಟ್ ಅಂಶಗಳಿವೆ
ಇದರ ಸೇವನೆಯು ಕರುಳಿನ ಹೊರ ಪದರವನ್ನು ಶಾಂತಗೊಳಿಸುತ್ತದೆ ಮತ್ತು ಕರುಳಿನ ಚಲನೆಯನ್ನು ಸುಧಾರಿಸುತ್ತದೆ
ಅಕ್ಕಿ ನೀರನ್ನು ತಯಾರಿಸಲು ಅಕ್ಕಿಗೆ ಸಾಕಷ್ಟು ನೀರು ಹಾಕಿ ಚೆನ್ನಾಗಿ ಕುದಿಸಿ ಮತ್ತು ಆ ನೀರನ್ನು ಫಿಲ್ಟರ್ ಮಾಡಿ, ತಣ್ಣಗಾದ ನಂತರ ಕುಡಿಯಿರಿ
ಅಕ್ಕಿ ನೀರಿಗೆ ಉಪ್ಪು, ಜೀರಿಗೆ, ಶುಂಠಿ, ಪುದಿನಾ ಸೊಪ್ಪು ಸೇರಿಸಿ ಸೇವಿಸುವುದರಿಂದ ರುಚಿ ಹಾಗೂ ಗುಣಮಟ್ಟ ಎರಡೂ ಹೆಚ್ಚುತ್ತದೆ
ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ತೀವ್ರ ಮಲಬದ್ಧತೆ ಸಮಸ್ಯೆ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ
ಪದಾರ್ಪಣೆ ಪಂದ್ಯದಲ್ಲೇ ವರುಣ್ ಚಕ್ರವರ್ತಿ ದಾಖಲೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ