ಅತಿಯಾಗಿ ನಿದ್ದೆ ಕಾಡ್ತಿದ್ಯಾ, ದೇಹದಲ್ಲಿ ಈ ವಿಟಮಿನ್‌ಗಳ ಕೊರತೆ ಇರಬಹುದು ಗಮನಿಸಿ

By Reshma
Aug 28, 2024

Hindustan Times
Kannada

ಮನುಷ್ಯ ಆರೋಗ್ಯಕರವಾಗಿ, ಫಿಟ್‌ ಆಗಿರಲು ನಿರ್ದಿಷ್ಟ ಸಮಯ ನಿದ್ದೆ ಮಾಡುವುದು ಬಹಳ ಅವಶ್ಯ. ಆದರೆ ಕೆಲವರು ಅತಿಯಾಗಿ ನಿದ್ದೆ ಮಾಡುತ್ತಾರೆ

ಆರೋಗ್ಯವಂತ ಮನುಷ್ಯರಿಗೆ 8 ಗಂಟೆಗಳ ಕಾಲ ನಿದ್ದೆ ಬೇಕು. ಹಾಗಂತ ಅದಕ್ಕಿಂತ ಜಾಸ್ತಿ ನಿದ್ದೆ ಮಾಡುವುದು ಖಂಡಿತ ಅಪಾಯಕಾರಿ ಎನ್ನುತ್ತವೆ ಅಧ್ಯಯನಗಳು. ಅತಿಯಾಗಿ ನಿದ್ದೆ ಮಾಡುತ್ತಾರೆ ಎಂದರೆ ಅದಕ್ಕೆ ಜೀವಸತ್ವಗಳ ಕೊರತೆಯೂ ಕಾರಣವಿರಬಹುದು

ಯಾವ ಜೀವಸತ್ವಗಳ ಕೊರತೆಯಿಂದ ಅತಿಯಾಗಿ ನಿದ್ದೆ ಬರುತ್ತದೆ ಎಂಬುದನ್ನು ನೋಡೋಣ

ಆರೋಗ್ಯ ತಜ್ಞರ ಪ್ರಕಾರ ವಿಟಮಿನ್ ಬಿ 12 ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ನೆರವಾಗುತ್ತದೆ. ಇದರ ಕೊರತೆಯು ರಕ್ತದ ಪ್ರಮಾಣ ಕಡಿಮೆಯಾಗಲು ಕಾರಣವಾಗುತ್ತದೆ 

ಕೆಂಪು ರಕ್ತಕಣಗಳು ದೇಹದಲ್ಲಿ ಆಮ್ಲಜನಕವನ್ನು ಸಾಗಿಸುತ್ತವೆ. ವಿಟಮಿನ್ ಬಿ 12 ಕೊರತೆಯು ರಕ್ತದ ಪ್ರಮಾಣ ಕಡಿಮೆಯಾಗುವಂತೆ ಮಾಡಿ ಅತಿಯಾಗಿ ನಿದ್ದೆ ಬರುತ್ತದೆ ಮಾಡುತ್ತದೆ

ಒಟ್ಟಾರೆಯಾಗಿ ವಿಟಮಿನ್ ಬಿ12 ಕೊರತೆಯು ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಅತಿಯಾದ ನಿದ್ದೆಗೆ ಕಾರಣವಾಗುತ್ತದೆ 

ಆರೋಗ್ಯ ತಜ್ಞರ ಪ್ರಕಾರ ವಿಟಮಿನ್ ಡಿ ದೇಹವನ್ನು ಬಲಪಡಿಸಲು ಬಹಳ ಮುಖ್ಯವಾದ ಪೋಷಕಾಂಶ. ಇದರ ಕೊರತೆಯಿಂದ ದೈಹಿಕವಾಗಿ ನಾವು ದುರ್ಬಲರಾಗುತ್ತೇವೆ. ಇದು ಕೂಡ ಅತಿಯಾಗಿ ನಿದ್ದೆ ಬರಲು ಕಾರಣ 

ವಿಟಮಿನ್ ಸಿ ಕೊರತೆಯು ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ನಮ್ಮ ದೈಹಿಕ ಶಕ್ತಿ ಕೊರತೆಗೆ ಕಾರಣವಾಗುತ್ತದೆ. ಆಯಾಸ ಹಾಗೂ ದೌರ್ಬಲ್ಯದಿಂದ ಕೂಡ ಅತಿಯಾದ ನಿದ್ದೆ ಕಾಡಬಹುದು 

ವಿಟಮಿನ್ ಬಿ 12, ವಿಟಮಿನ್ ಡಿ ಹಾಗೂ ವಿಟಮಿನ್ ಸಿ ಹೊರತು ಪಡಿಸಿ ಕೆಲವು ಖನಿಜಗಳು ನಿದ್ದೆಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಕಬ್ಬಿಣಾಂಶ ಹಾಗೂ ಮೆಗ್ನಿಶಿಯಂ ಕೊರತೆಯು ಅತಿಯಾದ ನಿದ್ದೆಗೆ ಕಾರಣವಾಗುತ್ತದೆ 

ದಿನದಲ್ಲಿ 7 ಅಥವಾ 8 ಗಂಟೆಗಳಿಗಿಂತ ಹೆಚ್ಚು ನಿದ್ದೆ ಮಾಡಬಾರದು. ನಿದ್ದೆಯ ಚಕ್ರ ಉತ್ತಮವಾಗಿರಬೇಕು. ಅದಕ್ಕಾಗಿ ನಿಮ್ಮ ಆಹಾರದಲ್ಲಿ ವಿಟಮಿನ್‌ಗಳು, ಕಬ್ಬಿಣಾಂಶ ಹಾಗೂ ಮೆಗ್ನಿಶಿಯಂ ಅಂಶ ಇರುವಂತೆ ನೋಡಿಕೊಳ್ಳಿ

ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.  

ನವರಾತ್ರಿ ಸ್ಪೆಷಲ್: ಬೊಂಬಾಟ್‌ ಬ್ಲೌಸ್ ಡಿಸೈನ್‌ಗಳಿವು

Meta AI