ಮಧುಮೇಹಿಗಳು ತಮ್ಮ ಆಹಾರಕ್ರಮದ ಮೇಲೆ ಹೆಚ್ಚು ಗಮನ ಹರಿಸಬೇಕು. ಮಧುಮೇಹಿಗಳಿಗೆ ಸಕ್ಕರೆ ಅಂಶ ಇರುವ ಆಹಾರ ಸೇವಿಸದಂತೆ ಸಲಹೆ ನೀಡಲಾಗುತ್ತದೆ.
ಹಣ್ಣು ಆರೋಗ್ಯಕ್ಕೆ ಒಳ್ಳೆಯದಾದ್ರೂ ಮಧುಮೇಹಿಗಳು ಕೆಲವು ಹಣ್ಣುಗಳನ್ನು ಸೇವಿಸುವಂತಿಲ್ಲ. ಇದರಿಂದ ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆಯಾಗಬಹುದು.
ಮಾವಿನಹಣ್ಣಿನಲ್ಲಿ ಸಕ್ಕರೆಯ ಅಂಶ ಹೆಚ್ಚಿರುವ ಕಾರಣ ಮಧುಮೇಹಿಗಳು ತಪ್ಪಿಯೂ ಈ ಹಣ್ಣನ್ನು ತಿನ್ನಬಾರದು.
ಮಾಗಿದ ಬಾಳೆಹಣ್ಣು ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿರುತ್ತವೆ. ಹಾಗಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟ ಅಧಿಕ ಇರುವವರು, ಮಧುಮೇಹದಿಂದ ಬಳಸುವವರು ಬಾಳೆಹಣ್ಣು ತಿನ್ನುವುದನ್ನು ತಪ್ಪಿಸಬೇಕು.
ನೈಸರ್ಗಿಕ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಸಮೃದ್ಧವಾಗಿರುವ ಅನಾನಸ್ ಮಧುಮೇಹಗಳಿಗೆ ಒಳ್ಳೆಯದಲ್ಲ.
ಆರೋಗ್ಯ ತಜ್ಞರ ಪ್ರಕಾರ ದ್ರಾಕ್ಷಿಯಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗಿರುತ್ತದೆ. ಇದನ್ನು ನೀವು ಪ್ರತಿದಿನ ಸೇವಿಸುವುದರಿಂದ ದೇಹದಲ್ಲಿನ ಸಕ್ಕರೆಯ ಪ್ರಮಾಣ ಏರಿಕೆಯಾಗುತ್ತದೆ.
ಮಧುಮೇಹಿಗಳಿಗೆ ಲಿಚಿ ಹಣ್ಣು ಒಳ್ಳೆಯದಲ್ಲ. ಇದರಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿದ್ದು, ಇದು ಮಧುಮೇಹ ಏರಿಕೆಗೆ ಕಾರಣವಾಗಬಹುದು.
ಮಧುಮೇಹಿಗಳು ಕಲ್ಲಂಗಡಿ ತಿನ್ನುತ್ತಾರೆ. ಆದರೆ ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಪ್ರಮಾಣ ಹೆಚ್ಚಿದೆ. ಇದು ಮಧುಮೇಹಿಗಳಿಗೆ ಹಾನಿಕಾರಕ.
ಸಪೋಟಾ ಮಧುಮೇಹಿಗಳಿಗೆ ಎಂದಿಗೂ ಒಳ್ಳೆಯದಲ್ಲ. ಇದು ತುಂಬಾ ಸಿಹಿಯಾದ ಹಣ್ಣು, ಇದರಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿರುತ್ತದೆ.
ಈ ಲೇಖನವು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ನಿಖರ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.