ಸಿರಿಧಾನ್ಯಗಳ ಹಾಲು ಕುಡಿದಿದ್ದೀರಾ?
By Meghana B
Feb 24, 2024
Hindustan Times
Kannada
ಇದು ಸಿರಿಧಾನ್ಯಗಳಿಂದ ತಯಾರಿಸಿದ ಸಸ್ಯಜನ್ಯ ಹಾಲು ಆಗಿದ್ದು. ಪೋಷಕಾಂಶಗಳ ಆಗರವಾಗಿದೆ.
ಕೆಲವರಿಗೆ ಆಕಳು ಹಾಲು ಕುಡಿದರೆ ಆಗುವುದಿಲ್ಲ. ಅಂತವರು ಸಿರಿಧಾನ್ಯಗಳ ಹಾಲನ್ನು ಸೇವಿಸಬಹುದು. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಇದನ್ನು ತಯಾರಿಸುವುದು ಬಹಳ ಸುಲಭ. ಸಿರಿಧಾನ್ಯಗಳನ್ನ ನೆನೆಸಿ, ರುಬ್ಬಿ, ಸೋಸಿದರೆ ಹಾಲು ಸಿದ್ಧವಾಗುತ್ತದೆ.
ರಾಗಿ ಹಾಲು: ಇದು ಕ್ಯಾಲ್ಸಿಯಂ, ಕಬ್ಬಿಣ, ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ನಿಂದ ಸಮೃದ್ಧವಾಗಿದೆ.
ಸಜ್ಜೆ: ಹೆಚ್ಚು ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಭರಿತ ಆಹಾರವಾಗಿದೆ.
ಬರಗು: ಫೈಬರ್, ವಿಟಮಿನ್ಸ್, ಖನಿಜಗಳ ಆಗರವಾಗಿದ್ದು ಜೀರ್ಣಕ್ರಿಯೆ ಸುಧಾರಿಸಲು ಉತ್ತಮ ಆಹಾರ.
ನವಣೆ: ಖನಿಜ, ಜೀವಸತ್ವ, ಆ್ಯಂಟಿಆಕ್ಸಿಡೆಂಟ್ನಿಂದ ಕೂಡಿದೆ.
ಕೊರಲೆ: ವಿಟಮಿನ್ಸ್, ಖನಿಜಗಳಿಂದ ಕೂಡಿದೆ.
ಬೆಳಗ್ಗೆ ನಿದ್ದೆ, ಮಧ್ಯರಾತ್ರಿ ಜಿಮ್; ಇದು ಶಾರುಖ್ ಖಾನ್ ಲೈಫ್‌ಸ್ಟೈಲ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ