ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಿಸುವ ಆಹಾರಗಳಿವು 

By Reshma
Aug 19, 2024

Hindustan Times
Kannada

ಇತ್ತೀಚಿನ ದಿನಗಳಲ್ಲಿ ಹಲವರಿಗೆ ರಕ್ತಹೀನತೆಯ ಸಮಸ್ಯೆ ಕಾಡುತ್ತಿದೆ. ದೇಹದಲ್ಲಿ ರಕ್ತದ ಕೊರತೆಯಿಂದ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. 

ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಕಬ್ಬಿಣಾಂಶ ಇರುವ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು

ಕಬ್ಬಿಣಾಂಶ ಸಮೃದ್ಧವಾಗಿರುವ ಆಹಾರಗಳು ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು ಪ್ರಯೋಜನಕಾರಿ. ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಿಸುವ ಆಹಾರಗಳು ಯಾವುವು ನೋಡಿ. 

ಪಾಲಕ್‌ ಸೊಪ್ಪು, ಫೋಲೆಟ್‌ ಮತ್ತು ವಿಟಮಿಮ್‌ ಸಿಯಲ್ಲಿ ಸಮೃದ್ಧವಾಗಿದೆ. ಈ ಮೂರು ಪೋಷಕಾಂಶಗಳು ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು ಪ್ರಯೋಜನಕಾರಿ. 

ಕಬ್ಬಿಣಾಂಶ, ಫೋಲಿಕ್‌ ಆಸಿಡ್‌ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಬೀಟ್‌ರೂಟ್‌ ಅನ್ನು ಪ್ರತಿನಿತ್ಯ ಸೇವಿಸುವುದರಿಂದ ದೇಹದಲ್ಲಿನ ರಕ್ತದ ಪ್ರಮಾಣ ಏರಿಕೆಯಾಗುತ್ತದೆ

ಪ್ರತಿದಿನ ದಾಳಿಂಬೆ ಸೇವಿಸುವುದರಿಂದ ಕೂಡ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುತ್ತದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. 

ಧಾನ್ಯಗಳಲ್ಲಿ ಕಬ್ಬಿಣಾಂಶ ಸಮೃದ್ಧವಾಗಿದೆ. ಇದು ರಕ್ತಹೀನತೆ ತೊಡೆದು ಹಾಕಲು ಸಹಕಾರಿ 

ಒಣಹಣ್ಣುಗಳಲ್ಲಿ ಕಬ್ಬಿಣಾಂಶವು ಉತ್ತಮ ಪ್ರಮಾಣದಲ್ಲಿರುತ್ತದೆ. ಬಾದಾಮಿ, ಪಿಸ್ತಾ, ಗೋಡಂಬಿ ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ 

ದೇಹದಲ್ಲಿನ ರಕ್ತದ ಕೊರತೆಯನ್ನು ಹೋಗಲಾಡಿಸಲು ಮತ್ತು ರಕ್ತಹೀನತೆಯಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಲು ಆಹಾರದಲ್ಲಿ ಖರ್ಜೂರ, ವಾಲ್‌ನಟ್ಸ್‌ ಮತ್ತು ಅಂಜೂರದಂತಹ ಹಣ್ಣುಗಳನ್ನು ಸೇವಿಸಬಹುದು. 

ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ. 

ತೂಕ ಇಳಿಕೆಯಿಂದ ತ್ವಚೆಯ ಕಾಳಜಿಯವರೆಗೆ: ಮೊಳಕೆ ಕಾಳುಗಳ ಪ್ರಯೋಜನಗಳಿವು

pixel